ಕಾಸರಗೋಡು: ಹಿರಿಯ ಪತ್ರಕರ್ತ ಹಜ್ ಶಾಫಿ ತೆರುವತ್ ಅವರು ಯಾತ್ರಿಕರ ಅನುಕೂಲಕ್ಕಾಗಿ ಬರೆದ ಹಜ್ ಮತ್ತು ಮೆಕ್ಕಾ ಮದೀನಾಗಳ ವೃತ್ತಾಂತಗಳನ್ನೊಳಗೊಂಡ 'ಪವಿತ್ರ ಭೂಮಿಯ ಮೂಲಕ ಮೆಕ್ಕಾ-ಮದೀನಾ' ಎಂಬ ಪುಸ್ತಕದ ಕುರಿತು ಅವಲೋಕನಾ ಕಾರ್ಯಕ್ರಮ ಮೊಗ್ರಾಲಿನ ರಾಷ್ಟ್ರೀಯ ವೇದಿ ವತಿಯಿಂದ ಜರುಗಿತು.
ಖ್ಯಾತ ವಾಗ್ಮಿ ಎಂ.ಎ ಅಬ್ದುಲ್ ರಹಮಾನ್ ಪುಸ್ತಕದ ಬಗ್ಗೆ ಮಾತನಾಡಿ, ಹಜ್ ಸಮಯದಲ್ಲಿ ಇಂತಹ ಪುಸ್ತಕಗಳು ಹೆಚ್ಚಿನ ಪ್ರಾಮುಖ್ಯತೆ ಪಡೆದುಕೊಳ್ಳುತ್ತಿದ್ದು, ಪುಸ್ತಕದಲ್ಲಿನ ಮಾಹಿತಿಯು ಯಾತ್ರೆಗೆ ಸಹಾಯವಾಗುತ್ತದೆ ಎಂದು ತಿಳಿಸಿದರು.
ರಾಷ್ಟ್ರೀಯ ವೇದಿಕೆ ಅಧ್ಯಕ್ಷ ಟಿ.ಕೆ.ಅನ್ವರ್ ಅಧ್ಯಕ್ಷತೆ ವಹಿಸಿದ್ದರು. ರಾಷ್ಟ್ರೀಯ ವೇದಿ ಯುಎಇ ಸಮಿತಿಯ ಮಾಜಿ ಉಪಾಧ್ಯಕ್ಷ ಎ.ಕೆ. ಶಂಸುದ್ದೀನ್, ಶಾಫಿ ತೆರುವತ್ ಪುಸ್ತಕವನ್ನು ಪಡೆದುಕೊಂಡರು.
ಉದ್ಯಮಿ ಎಂ.ಎ.ಹಮೀದ್, ಹಮೀದ್ ಪೆರ್ವಾಡ್, ಪಿ.ಟಿ.ಎ ಅಧ್ಯಕ್ಷ ಅಶ್ರಫ್ ಪೆರ್ವಾಡ್, ಮುಹಮ್ಮದ್ ಅಬ್ಕೋ, ಬಿ.ಎ.ಮುಹಮ್ಮದ್ ಕುಞÂ, ಮುಹಮ್ಮದ್ ಅಶ್ರಫ್ ಸಾಹಿಬ್, ಖಾದರ್‍ಮೊಗ್ರಾಲ್, ಮೊದಲದವರು ಉಪಸ್ಥಿತರಿದ್ದರು. ಕಾರ್ಯದರ್ಶಿ ಎಂ.ಎ. ಮೂಸಾ ಸ್ವಾಗತಿಸಿದರು. ಕೋಶಾಧಿಕಾರಿ ಪಿ.ಎಂ.ಮುಹಮ್ಮದ್‍ಕುಞ ವಂದಿಸಿದರು.





