ಕಾಸರಗೋಡು: ಕೇರಳ ಹೋಟೆಲ್ ಮತ್ತು ರೆಸ್ಟೋರೆಂಟ್ ಸಂಘದ ವತಿಯಿಂದ ಹೋಟೆಲ್ ಮಾಲೀಕರು, ಕಾರ್ಮಿಕರು ಮತ್ತು ಅವರ ಕುಟುಂಬ ಸದಸ್ಯರಿಗಾಗಿ ಜಾರಿಗೆ ತರಲಾಗಿರುವ ಕುಟುಂಬ ಸುರಕ್ಷತಾ ಯೋಜನೆಯನ್ವಯ ಮೂರು ಕುಟುಂಬಗಳಿಗೆ ತಲಾ 10 ಲಕ್ಷ ರೂ. ಹಸ್ತಾಂತರಿಸುವ ಸಮಾರಂಭ ಕಾಸರಗೋಡು ಹೊಸ ಬಸ್ ನಿಲ್ದಾಣ ವಠಾರದಲ್ಲಿ ಜರುಘೀಥೂ.
ಕಾಸರಗೋಡು ಸಂಸದ ರಾಜಮೋಹನ್ ಉಣ್ಣಿತ್ತಾನ್ ಯೋಜನೆ ಉದ್ಘಾಟಿಸಿ ಫಲಾನುಭವಿಗಳಿಗೆ ಧನಸಹಾಯ ವಿತರಿಸಿದರು. ಜಿಲ್ಲೆಯಲ್ಲಿ ಮೃತಪಟ್ಟ ಮೂರುಮಂದಿಯ ಕುಟುಂಬಗಳಿಗೆ ಯೋಜನೆಯನ್ವಯ ತಲಾ ಹತ್ತು ಲಕ್ಷ ರೂ. ವಿತರಿಸಲಾಯಿತು.
ಸಂಘದ ಜಿಲ್ಲಾಧ್ಯಕ್ಷ ನಾರಾಯಣ ಪೂಜಾರಿ ಅಧ್ಯಕ್ಷತೆ ವಹಿಸಿದ್ದರು. ಸಂಘದ ರಾಜ್ಯಾಧ್ಯಕ್ಷ ಜಿ.ಜಯಪಾಲ್ ಮುಖ್ಯ ಅತಿಥಿಯಾಗಿದ್ದರು. ರಾಜ್ಯ ಸಮಿತಿ ಪ್ರಧಾನ ಕಾರ್ಯದರ್ಶಿ ಬಾಲಕೃಷ್ಣ ಪೆÇದುವಾಳ್, ರಾಜ್ಯ ಸಮಿತಿ ಕೋಶಾಧಿಕಾರಿ ಶರೀಫ್, ಕಾರ್ಯಾಧ್ಯಕ್ಷ ಬಿಜು ಲ್ಯಾನ್, ಜಿ.ಸುಗುಣನ್, ರಾಯ್ ಮಡೋನ್ನಾ, ಶಿನೋಜ್ ರೆಹಮಾನ್, ನಾಸರ್ ತಾಜ್, ಸಮದ್ ಮಲಪ್ಪುರಂ, ರಘುವೀರ್ ಪೈ ಮೊದಲದವರು ಉಪಸ್ಥಿತರಿದ್ದರು. ಜಿಲ್ಲಾ ಕಾರ್ಯದರ್ಶಿ ಬಿಜು ಚುಳ್ಳಿಕ್ಕರ ಸ್ವಾಗತಿಸಿದರು. ಯೋಜನೆ ಜಿಲ್ಲಾ ಸಮಿತಿ ಅಧ್ಯಕ್ಷ ರಾಜನ್ ಕಳಕ್ಕರ ವಂದಿಸಿದರು.





