ಉಪ್ಪಳ:ಸ್ಕೂಟರಲ್ಲಿ ಸಂಚರಿಸುತ್ತಿದ್ದ ವ್ಯಾಪಾರಿ, ಉಪ್ಪಳ ಸೋಂಕಾ¼ಲು ಕೊಡಂಗೆ ನಿವಾಸಿ ಅಬ್ಬಾಸ್ ಎಂಬವರಿಗೆ ಕಣಜದ ಹುಳು ದಾಳಿ ನಡೆಸಿದ ಪರಿಣಾಮ ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಾಗಿದ್ದಾರೆ. ಅಂಬಾರಿನಲ್ಲಿ ದಿನಸಿ ವ್ಯಾಪಾರಿಯಾಗಿರುವ ಅಬ್ಬಾಸ್ ಅವರು ಸೋಮವಾರ ಸಂಜೆ ಅಂಗಡಿಯಿಂದ ಮನೆಗೆ ಸ್ಕೂಟರಲ್ಲಿ ಸಂಚರಿಸುವ ಮಧ್ಯೆ ಸೋಂಕಾಲಿನಲ್ಲಿ ಏಕಾಏಕಿ ಕಣಜದ ಹುಳು ದಾಳಿ ನಡೆಸಿದೆ. ತಕ್ಷಣ ಉಪ್ಪಳದಿಂದ ಆಗಮಿಸಿದ ಅಗ್ನಿಶಾಮಕ ದಳ ಸಿಬ್ಬಂದಿ ರಕ್ಷಿಸಿ, ತಮ್ಮ ವಾಹನದಲ್ಲಿ ಅಬ್ಬಾಸ್ ಅವರನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ.




