ಮೇ 18ಕ್ಕೆ ಸರ್ವಋತು ಕಣ್ಗಾವಲು ಉಪಗ್ರಹ ಉಡಾವಣೆ: ಇಸ್ರೋ
0
ಮೇ 14, 2025
ನವದೆಹಲಿ: ಎಲ್ಲ ಹವಾಮಾನ ಪರಿಸ್ಥಿತಿಗಳಲ್ಲೂ ಬಾಹ್ಯಾಕಾಶದಿಂದ ಕಣ್ಗಾವಲು ನಡೆಸಲು ತನ್ನ ಸಾಮರ್ಥ್ಯ ಹೆಚ್ಚಿಸುವ ನಿಟ್ಟಿನಲ್ಲಿ ಭಾರತವು ಭೂ ವೀಕ್ಷಣಾ ಉಪಗ್ರಹವನ್ನು ಉಡಾವಣೆ ಮಾಡಲಿದೆ. ಶ್ರೀಹರಿಕೋಟಾದಲ್ಲಿ ಮೇ 18ರಂದು ಇಒಎಸ್-09 ಉಪಗ್ರಹದ ಉಡಾವಣೆಯನ್ನು ನಡೆಸಲಾಗುತ್ತಿದ್ದು, ಇದಕ್ಕೆ ವಿಜ್ಞಾನ ಹಾಗೂ ತಂತ್ರಜ್ಞಾನದ ಸಂಸದೀಯ ಸ್ಥಾಯಿ ಸಮಿತಿಯಲ್ಲಿರುವ ಸಂಸದರು ಸಾಕ್ಷಿಯಾಗಲಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
Tags




