ಕುಂಬಳೆ: ಕೇರಳ ಜರ್ನಲಿಸ್ಟ್ ಯೂನಿಯನ್(ಕೆಜೆಯು) ಕಾಸರಗೋಡು ಜಿಲ್ಲಾ ಜೊತೆ ಕಾರ್ಯದರ್ಶಿ ಹಾಗೂ ಕುಂಬಳೆ ಪ್ರೆಸ್ ಪೋರಂ ಸದಸ್ಯ ಧನರಾಜ್ ಐಲ ಅವರ ಚಿಕಿತ್ಸೆಗಾಗಿ ಕೆಜೆಯು ರಾಜ್ಯ ಸಮಿತಿ ಸದಸ್ಯರಿಂದ ಸಂಗ್ರಹಿಸಿದ 75,000 ರೂ.ಗಳನ್ನು ರಾಜ್ಯ ಉಪಾಧ್ಯಕ್ಷ ಪ್ರಕಾಶನ್ ಪಯ್ಯನ್ನೂರು ಮತ್ತು ಕಾರ್ಯದರ್ಶಿ ಎಂ. ಪ್ರಮೋದ್ ಕುಮಾರ್ ನೇತೃತ್ವದಲ್ಲಿ ಹಸ್ತಾಂತರಿಸಲಾಯಿತು. ಉಪ್ಪಳದಲ್ಲಿರುವ ಧನರಾಜ್ ಅವರ ನಿವಾಸದಲ್ಲಿ ಚೆಕ್ ಹಸ್ತಾಂತರಿಸಲಾಯಿತು. ಚಿಕಿತ್ಸಾ ಸಹಾಯ ನಿಧಿಯನ್ನು ಸಂಗ್ರಹಿಸುವಲ್ಲಿ ಸಹಕರಿಸಿದ ಕೆಜೆಯು ಎಲ್ಲಾ ಸದಸ್ಯರಿಗೆ ರಾಜ್ಯ ಸಮಿತಿ ಅಧ್ಯಕ್ಷ ಅನಿಲ್ ಬಿಸ್ವಾಸ್,ಪ್ರ.ಕಾರ್ಯದರ್ಶಿಕೆ.ಸಿ. ಸ್ಮಿಜನ್ ಅಭಿನಂದನೆ ಸಲ್ಲಿಸಿದ್ದಾರೆ.

.jpg)
