HEALTH TIPS

ಪ್ಲಸ್ ಒನ್ ಪ್ರವೇಶ: ವಿದ್ಯಾರ್ಥಿಗಳು ಭವಿಷ್ಯದ ಯೋಜನೆಗಳನ್ನು ರೂಪಿಸುತ್ತಿದ್ದಾರೆಯೇ?: ಏನೇನು ಮಾಡಬಹುದು?

ತಿರುವನಂತಪುರಂ:  ವಿದ್ಯಾರ್ಥಿಗಳು ಪ್ಲಸ್ ಒನ್ ಪ್ರವೇಶದಿಂದಲೂ ತಮ್ಮ ಭವಿಷ್ಯವನ್ನು ಯೋಜಿಸಲು ಪ್ರಾರಂಭಿಸುತ್ತಾರೆ. 

ಪ್ರಸ್ತುತ ಪರಿಸ್ಥಿತಿಯಲ್ಲಿ, ಪ್ಲಸ್ ಒನ್ ಪ್ರವೇಶಕ್ಕೆ ಅರ್ಹರಾಗಿರುವ ಎಲ್ಲಾ ವಿದ್ಯಾರ್ಥಿಗಳಿಗೆ ಸೀಟು ಲಭ್ಯವಾಗುವುದು ಎಂದು ಸರ್ಕಾರ ಖಾತರಿಪಡಿಸುತ್ತಿದೆ. ಆದರೆ, ವಿದ್ಯಾರ್ಥಿಗಳು ತಮ್ಮ ಭವಿಷ್ಯಕ್ಕಾಗಿ ಯೋಜಿಸಿರುವ ಕೋರ್ಸ್‍ಗಳನ್ನು ಪಡೆಯಲು ಸಾಧ್ಯವಾಗುತ್ತದೆಯೇ ಎಂಬ ಚಿಂತೆಯಲ್ಲಿದ್ದಾರೆ.

ಕೇರಳ ಪಠ್ಯಕ್ರಮದಲ್ಲಿ ಅಧ್ಯಯನ ಮಾಡಲು ಬಯಸುವವರಿಗೆ 46 ಸಂಯೋಜನೆಗಳಿವೆ. ಪ್ಲಸ್ ಟು ಅಧ್ಯಯನಕ್ಕೆ ಸಾಮಾನ್ಯವಾಗಿ 45 ಕೋರ್ಸ್ ಕೋಡ್‍ಗಳನ್ನು ಪರಿಗಣಿಸಬೇಕಾಗುತ್ತದೆ. ವಿಜ್ಞಾನ ಗುಂಪಿನಲ್ಲಿ 9 ವಿಷಯ ಸಂಯೋಜನೆಗಳಿವೆ.


ಮಾನವಿಕ ಗುಂಪಿನಲ್ಲಿ 32 ವಿಷಯ ಸಂಯೋಜನೆಗಳಿವೆ. ವಾಣಿಜ್ಯದಲ್ಲಿ ಆಸಕ್ತಿ ಹೊಂದಿರುವವರಿಗೆ 4 ಸಂಯೋಜನೆಗಳಿವೆ.

ವೈದ್ಯಕೀಯ, ಎಂಜಿನಿಯರಿಂಗ್ ಮತ್ತು ಇತರ ವೈಜ್ಞಾನಿಕ ಕ್ಷೇತ್ರಗಳಲ್ಲಿ ಉನ್ನತ ಶಿಕ್ಷಣದ ಅವಕಾಶಗಳನ್ನು ಬಯಸುವವರು ವಿಜ್ಞಾನ ಗುಂಪಿನಲ್ಲಿ ಸಂಯೋಜನೆಗಳನ್ನು ಆರಿಸಿಕೊಳ್ಳಬೇಕು.

ವೈದ್ಯಕೀಯ ಅಥವಾ ಎಂಜಿನಿಯರಿಂಗ್ ಅಧ್ಯಯನ ಮಾಡುವ ಗುರಿ ಹೊಂದಿರುವವರು ಭೌತಶಾಸ್ತ್ರ, ರಸಾಯನಶಾಸ್ತ್ರ, ಗಣಿತ ಮತ್ತು ಜೀವಶಾಸ್ತ್ರ ವಿಷಯಗಳ ಸಂಯೋಜನೆಯನ್ನು ಆರಿಸಿಕೊಂಡು ಅಧ್ಯಯನ ಮಾಡಬೇಕು.

ವೈದ್ಯಕೀಯ ಪ್ರವೇಶವನ್ನು ಮಾತ್ರ ಗುರಿಯಾಗಿಸಿಕೊಂಡವರಿಗೆ, ವಿಜ್ಞಾನದಲ್ಲಿ ಗಣಿತವನ್ನು ಹೊರತುಪಡಿಸಿದ ಸಂಯೋಜನೆಗಳಿವೆ.

ಬ್ಯಾಂಕಿಂಗ್, ಹಣಕಾಸು, ವಿಮೆ ಮತ್ತು ಲೆಕ್ಕಪತ್ರ ನಿರ್ವಹಣೆಯಂತಹ ಕ್ಷೇತ್ರಗಳಲ್ಲಿ ಆಸಕ್ತಿ ಹೊಂದಿರುವವರು ವಾಣಿಜ್ಯ ಗುಂಪಿನಲ್ಲಿ ಸಂಯೋಜನೆಗಳನ್ನು ಆಯ್ಕೆ ಮಾಡಬಹುದು.

ಆದ್ಯತೆಯ ಸಂಯೋಜನೆಗಳನ್ನು ಹೊಂದಿರುವ ಶಾಲೆಗಳನ್ನು ಆಯ್ಕೆ ಮಾಡಲು ಮತ್ತು ಪ್ರವೇಶವನ್ನು ಖಚಿತಪಡಿಸಿಕೊಳ್ಳಲು ಏಕ-ಗವಾಕ್ಷಿ  ಅರ್ಜಿ ಸಲ್ಲಿಕೆ ಹಂತಕ್ಕೆ ಗಮನ ನೀಡಬೇಕು. ಪ್ರವೇಶ ಮತ್ತು ಹಂಚಿಕೆಯನ್ನು www.hscap.kerala.gov.in ವೆಬ್‍ಸೈಟ್ ಮೂಲಕ ಮಾಡಲಾಗುತ್ತದೆ.

ಶಾಲೆಗಳು ಮತ್ತು ಕೋರ್ಸ್ ಕೋಡ್‍ಗಳ ಬಗ್ಗೆ ತಿಳಿದುಕೊಳ್ಳಲು, ವೆಬ್‍ಸೈಟ್‍ನಲ್ಲಿರುವ 'ಶಾಲಾ ಪಟ್ಟಿ' ಮೇಲೆ ಕ್ಲಿಕ್ ಮಾಡಿ ಮತ್ತು ಜಿಲ್ಲೆಯ ಹೆಸರನ್ನು ನಮೂದಿಸಿ. ಅಲ್ಲಿ ಲಭ್ಯವಿರುವ ಶಾಲೆಗಳ ಹೆಸರುಗಳು ಮತ್ತು ಕೋರ್ಸ್‍ಗಳ ಕೋಡ್‍ಗಳ ಬಗ್ಗೆ ನಿಮಗೆ ಮಾಹಿತಿ ಸಿಗುತ್ತದೆ.

ಆದರೆ, ಈ ಬಾರಿ ಹೆಚ್ಚಿನ ಉತ್ತೀರ್ಣತೆ  ಪ್ರಮಾಣವು ವಿದ್ಯಾರ್ಥಿಗಳನ್ನು ಚಿಂತೆಗೀಡುಮಾಡುತ್ತಿದೆ. ಇದರೊಂದಿಗೆ, ಬಯಸುವ ಪಠ್ಯ ಪಡೆಯಲು ನೀವು ಅದೃಷ್ಟಶಾಲಿಯಾಗಬೇಕಾಗಿರಬೇಕಾಗುತ್ತದೆಯೇನೊ!. ವಿದ್ಯಾರ್ಥಿಗಳು ತಮ್ಮ ನೆಚ್ಚಿನ ವಿಷಯ ಸಿಗದಿದ್ದರೆ ತಾವು ಯೋಜಿಸಿದ್ದೆಲ್ಲವೂ ವ್ಯರ್ಥವಾಗುತ್ತದೆ ಎಂದು ಚಿಂತಿತರಾಗಿದ್ದಾರೆ.

ಇದೇ ವೇಳೆ, ಪೋಷಕರು ಕಡಿಮೆ ಅಂಕಗಳನ್ನು ಪಡೆದ ವಿದ್ಯಾರ್ಥಿಗಳ ಮೇಲೆ ಒತ್ತಡ ಹೇರುವ ಪರಿಸ್ಥಿತಿ ಇದೆ. ಕೆಲವರು ಮಕ್ಕಳ ಅಂಕಗಳು ಕಡಿಮೆಯಾದಾಗ ಅವರ ಭವಿಷ್ಯ ಮುಗಿದುಹೋಯಿತು ಎಂಬಂತೆ ನೋಡಿಕೊಳ್ಳುತ್ತಾರೆ. ಇದು ಮಕ್ಕಳಲ್ಲಿ ತೀವ್ರ ಮಾನಸಿಕ ಒತ್ತಡವನ್ನು ಉಂಟುಮಾಡುತ್ತಿದೆ. ಈ ಪ್ರವೃತ್ತಿ ಸರಿಯಲ್ಲ ಎಂದು ತಜ್ಞರು ಹೇಳುತ್ತಾರೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries