ಕುಂಬಳೆ: ತಲಪಾಡಿ-ಚೆಂಗಳ ರೀಚ್‍ನ ಷಟ್ಪಥ ಬಹುತೇಕ ಪೂರ್ಣವಾಗಿದೆ. 45 ಮೀಟರ್ ಅಗಲವಿರುವ ಹೆದ್ದಾರಿಯಲ್ಲಿ 27 ಮೀಟರ್ ಪ್ರಧಾನ ಹೆದ್ದಾರಿ, ಇಕ್ಕೆಲಗಳಲ್ಲಿ ಸರ್ವಿಸ್ ರಸ್ತೆ ಸಹಿತ 18 ಮೀಟರ್ ಇರಲಿದೆ. ಯುಟಿಲಿಟಿ ಕಾರಿಡಾರ್, ಫುಟ್‍ಪಾತ್ ಇದರಲ್ಲಿರಲಿದೆ. ಪ್ರಧಾನ ರಸ್ತೆ ಹಾಗೂ ಸರ್ವಿಸ್ ರಸ್ತೆಯನ್ನು ಪರಸ್ಪರ ಬೇರ್ಪಡಿಸುವ ಗೋಡೆಯನ್ನು ಹೊರತುಪಡಿಸಿ 6.25 ಮೀಟರ್ ರಸ್ತೆಗೆ ಲಭಿಸಲಿದೆ. ಇಕ್ಕೆಲಗಳಲ್ಲಿ ಸಂಚಾರಕ್ಕೆ ಅನುಮತಿ ಇದೆ. ಸೇತುವೆಗಳ ಹಾಗೂ ಇತರ ಭಾಗಗಳಲ್ಲಿ ಸರ್ವಿಸ್ ರಸ್ತೆ ಇಲ್ಲ.
ಕರಂದಕ್ಕಾಡಿನಿಂದ ನುಳ್ಳಿಪ್ಪಾಡಿಯವರೆಗೆ 1.13 ಕಿ.ಮೀ. ಕಾಸರಗೋಡು ಪ್ಲೈಓವರ್‍ನಲ್ಲಿ ಹಾಗೂ ಉಪ್ಪಳದಿಂದ ಕೈಕಂಬದವರೆಗೆ ಒಂದು ಕಿಲೋ ಮೀಟರ್ ಭಾಗದಲ್ಲಿ ಅಂತಿಮ ಹಂತದ ಡಾಂಬಇನ್ನು 24 ಕಿ.ಮೀ. ಬಾಕಿ ಉಳಿದಿದೆರೀಕರಣ ಪೂರ್ಣಗೊಂಡಿದೆ. ಉಳಿದ ಕಡೆಗಳಲ್ಲೆಲ್ಲ ಡಾಂಬರೀಕರಣ ಪೂರ್ಣಗೊಂಡಿದೆ. ಉಳಿದ ಕಾಮಗಾರಿಗಳನ್ನು ಪೂರ್ಣಗೊಳಿಸಿ ಮೇ ತಿಂಗಳಾಂತ್ಯ ರಸ್ತೆಯನ್ನು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಕ್ಕೆ ಹಸ್ತಾಂತರಿಸಲಾಗುವುದು ಎಂದು ಸಂಬಂಧಪಟ್ಟವರು ತಿಳಿಸಿದ್ದಾರೆ.
ಸರ್ವಿಸ್ ರಸ್ತೆಗಳ ನಿರ್ಮಾಣ ಅಂತಿಮ ಹಂತದಲ್ಲಿದೆ. ಕಾಸರಗೋಡು ಪ್ಲೈಓವರ್‍ನ ಅಡಿಯಲ್ಲಿರುವ 1.5 ಕಿ.ಮೀ. ಭಾಗದಲ್ಲಿ, ಕುಂಬಳೆ ಪೇಟೆಯ ಸಮೀಪದಲ್ಲಿರುವ ಸಣ್ಣ ಭಾಗದಲ್ಲಿ ನಿರ್ಮಾಣ ಬಾಕಿ ಇದೆ. ಇದರ ಕಾಮಗಾರಿ ಶೀಘ್ರ ಗತಿಯಲ್ಲಿ ನಡೆಯುತ್ತಿದ್ದು, ಪ್ರಗತಿ ಹಂತದಲ್ಲಿದೆ. ಕಾಸರಗೋಡು ಪ್ಲೈಓವರ್ ಅಡಿಯಲ್ಲಿ ಸರ್ವಿಸ್ ರಸ್ತೆ ಹೊರತುಪಡಿಸಿ ಉಳಿದ ಭಾಗವನ್ನು ಇಂಟರ್‍ಲಾಕ್ ಅಳವಡಿಸಿ ಸುಂದರಗೊಳಿಸಲಾಗುವುದು. ಬಸ್ ಬೇಗಳು, ಫೂಟ್ ಓವರ್ ಬ್ರಿಡ್ಜ್‍ಗಳು ಕೆಲವೆಡೆಗಳಲ್ಲಿ ಪೂರ್ಣಗೊಂಡಿವೆ. ಉಳಿದವುಗಳ ಕಾಮಗಾರಿ ನಡೆಯುತ್ತಿದೆ.
ಹತ್ತು ಫೂಟ್ ಓವರ್ ಬ್ರಿಜ್‍ಗಳಿವೆ. 1703 ಕೋಟಿ ರೂ. ಮೊತ್ತದ ಈ ಕಾಮಗಾರಿಯನ್ನು ಊರುಳುಂಗಾಲ್ ಲೇಬರ್ ಕಾಂಟ್ರ್ಯಾಕ್ಟ್ ಸೊಸೈಟಿಯು ಗುತ್ತಿಗೆ ಪಡೆದುಕೊಂಡು ಕಾಮಗಾರಿ ನಡೆಸುತ್ತಿದೆ.
ಸರ್ವಿಸ್ ರಸ್ತೆ 6.25 ಮೀಟರ್ ಅಗಲ:
45 ಮೀಟರ್ ಅಗಲವಿರುವ ಹೆದ್ದಾರಿಯಲ್ಲಿ 27 ಮೀಟರ್ ಪ್ರಧಾನ ಹೆದ್ದಾರಿ, ಇಕ್ಕೆಲಗಳಲ್ಲಿ ಸರ್ವಿಸ್ ರಸ್ತೆ ಸಹಿತ 18 ಮೀಟರ್ ಇರಲಿದೆ. ಯುಟಿಲಿಟಿ ಕಾರಿಡಾರ್, ಫುಟ್‍ಪಾತ್ ಇದರಲ್ಲಿಲಿದೆ. ಪ್ರಧಾನ ರಸ್ತೆ ಹಾಗೂ ಸರ್ವಿಸ್ ರಸ್ತೆಯನ್ನು ಪರಸ್ಪರ ಬೇರ್ಪಡಿಸುವ ಗೋಡೆಯನ್ನು ಹೊರತುಪಡಿಸಿ 6.25 ಮೀಟರ್ ರಸ್ತೆಗೆ ಲಭಿಸಲಿದೆ. ಇಕ್ಕೆಲಗಳಲ್ಲಿ ಸಂಚಾರಕ್ಕೆ ಅನುಮತಿ ಇದೆ. ಸೇತುವೆಗಳ ಹಾಗೂ ಇತರ ಭಾಗಗಳಲ್ಲಿ ಸರ್ವಿಸ್ ರಸ್ತೆ ಇಲ್ಲ.
ಕಾಸರಗೋಡು ಮೇಲ್ಸೇತುವೆ:
ಎರಡು ಮೇಲ್ಸೇತುವೆಗಳು, ನಾಲ್ಕು ಪ್ರಧಾನ ಸೇತುವೆಗಳು, ನಾಲ್ಕು ಸಣ್ಣ ಸೇತುವೆಗಳು ಹೆದ್ದಾರಿಯಲ್ಲಿವೆ. 29 ಕಂಬಗಳು, 1.13 ಕಿ.ಮೀ. ಉದ್ದದ ಕಾಸರಗೋಡು ಒಂಟಿ ಕಂಬ ಪ್ಲೈ ಓವರ್ ತಲಪಾಡಿ-ಚೆಂಗಳ ರೀಚ್‍ನ ಪ್ರಧಾನ ಆಕರ್ಷಣೆಯಾಗಿದೆ. 210 ಮೀಟರ್ ಉದ್ದ, 20 ಕಂಬಗಳಿರುವ ಉಪ್ಪಳ ಸೇತುವೆಯು ದ್ವಿತೀಯ ಸ್ಥಾನದಲ್ಲಿದೆ. ಉಪ್ಪಳ, ಶಿರಿಯ, ಕುಂಬಳೆ, ಮೊಗ್ರಾಲ್ ಮೊದಲಾದ ದೊಡ್ಡ ಸೇತುವೆಗಳ, ಮಂಜೇಶ್ವರ, ಪೊಸೋಟು, ಸ್ವರ್ಣಗಿರಿ(ಕುಕ್ಕೆ) ಎರಿಯಾಲ್ ಸಣ್ಣ ಸೇತುವೆಗಳ ಕಾಮಗಾರಿ ಪೂರ್ಣಗೊಂಡಿದೆ.
ರಾಷ್ಟ್ರೀಯ ಹೆದ್ದಾರಿಯಲ್ಲಿ ಪೂರ್ಣವಾದ ಭಾಗದಿಂದ ವಾಹನಗಳ ಸಂಚಾರಕ್ಕೆ ಅವಕಾಶ ನೀಡಲಾಗಿದೆ. ತಲಪಾಡಿಯಿಂದ ಉಪ್ಪಳ ಗೇಟ್ ಹಿದಾಯತ್ ಬಜಾರ್‍ವರೆಗೆ, ನಯಾಬಜಾರ್‍ನಿಂದ ತಾಳಿಪಡ್ಪು ವರೆಗೆ ಇಕ್ಕೆಲಗಳಿಗೆ ವಾಹನಗಳು ಹಾದು ಹೋಗುತ್ತವೆ. ಉಪ್ಪಳ ಮೇಲ್ಸೇತುವೆಯ ಕಾಮಗಾರಿಯೂ ಪೂರ್ಣಗೊಂಡಿದೆ.
ಕಾಮಗಾರಿ ಪೂರ್ಣವಾಗುವುದರಿಂದ ತಲಪಾಡಿಯಿಂದ ಕಾಸರಗೋಡುವರೆಗೆ ಒಂದೂವರೆ ಗಂಟೆ ಬೇಕಿದ್ದ ಪ್ರಯಾಣ ರಸ್ತೆ ಅಭಿವೃದ್ಧಿಯಿಂದಾಗಿ ಕೇವಲ 45 ನಿಮಿಷಗಳಿಗೆ ಸೀಮಿತವಾಗಲಿದೆ.
ಮೇಲ್ಸೇತುವೆ ಅಡಿಯಲ್ಲಿ ಪಾರ್ಕ್:
ಕಾಸರಗೋಡು ಮೇಲ್ಸೇತುವೆ ಅಡಿಯಲ್ಲಿ ವಿ ಪಾರ್ಕ್ ನಿರ್ಮಿಸುವ ಕುರಿತು ಪರಿಗಣಿಸಲಾಗುತ್ತದೆ. ಸೇತುವೆಗಳ ಹಾಗೂ ಮೇಲ್ಸೇತುವೆಗಳ ಅಡಿಯಲ್ಲಿ ಲೋಕೋಪಯೋಗಿ ಇಲಾಖೆ, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ, ಜಿಲ್ಲಾಡಳಿತ ಸಹಕರಿಸಿ ಪಾರ್ಕ್ ನಿರ್ಮಿಸುತ್ತಿದೆ. ಕೊಲ್ಲಂನಲ್ಲಿಹಾಗೂ ಕೋಝಿಕ್ಕೋಡು ಫರೂಕ್ ನಲ್ಲಿ ಲೋಕೋಪಯೋಗಿ ಇಲಾಖೆ ಮುಂದೆ ನಿಂತು ಸ್ಥಾಪಿಸಿದ ವಿ ಪಾರ್ಕ್ ಗಳು ಯಶಸ್ವಿಯಾದ ಹಿನ್ನೆಲೆಯಲ್ಲಿ ಎಲ್ಲ ವಿಧಾನಸಭಾ ಕ್ಷೇತ್ರಗಳಲ್ಲೂ ಸ್ಥಾಪಿಸುವ ಕುರಿತು ಆಲೋಚನೆ ಇದೆ.
ಓಪನ್ ಜಿಮ್, ಶಟಲ್ ಕೋರ್ಟ್, ಸೈಕ್ಲಿಂಗ್ ರಸ್ತೆ, ಕುಳಿತುಕೊಂಡು ಓದಬಹುದಾದ ಸೌಕರ್ಯ, ಸ್ಟ್ರೀಟ್ ಫುಡ್ ಕೋರ್ಟ್, ಫುಟ್‍ಪಾತ್, ಟಾಯ್ಲೆಟ್ ಕಾಂಪ್ಲೆಕ್ಸ್, ಪಾರ್ಕಿಂಗ್ ಸ್ಥಳ ಮೊದಲಾದುವುಗಳನ್ನು ಈ ಉದ್ಯಾನ ಒಳಗೊಂಡಿದೆ. ಸೇತುವೆಯ ಕಂಬಗಳಲ್ಲಿಮೊದಲಾಗಿ ಪೈಂಟಿಂಗ್ ಅಳವಡಿಸಲಾಗುವುದು. ಸುರಕ್ಷೆಯನ್ನು ಖಾತರಿಪಡಿಸಲು ಸಿಸಿ ಟಿವಿ ಕ್ಯಾಮೆರಾಗಳು ಇರಲಿವೆ. ಕಾಸರಗೋಡು ಪಾರ್ಕ್ ಗೆ ಅನುಮತಿ ಆಗ್ರಹಿಸಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಕ್ಕೆ ಪತ್ರ ಕಳುಹಿಸಲಾಗಿದೆ. ಪಾರ್ಕಿಂಗ್‍ಗೆ ಹೆಚ್ಚುವರಿ ಸೌಕರ್ಯ ಬೇಕು ಎಂದು ವ್ಯಾಪಾರಿಗಳ ಭಾಗದಿಂದ ಬೇಡಿಕೆ ಉಂಟಾದ ಹಿನ್ನೆಲೆಯಲ್ಲಿ ಇದನ್ನು ಕೂಡ ಪರಿಗಣಿಸಿ ಕಾಸರಗೋಡು ಪಾರ್ಕ್ ನಿರ್ಮಿಸಲಾಗುವುದು ಎಂದು ಜಿಲ್ಲಾಧಿಕಾರಿ ಕೆ. ಇಂಬಾಶೇಖರ್ ಹೇಳಿದ್ದಾರೆ.
ಚೆಂಗಳ-ನೀಲೇಶ್ವರ ರೀಚ್‍ನಲ್ಲಿ ಶೇ. 78:
37 ಕಿ.ಮೀ. ಬರುವ ಚೆಂಗಳ-ನೀಲೇಶ್ವರ ರೀಚ್‍ನಲ್ಲಿ ಶೇ. 78 ಕಾಮಗಾರಿ ಪೂರ್ಣಗೊಂಡಿದೆ. ಉಳಿದ ಕಾಮಗಾರಿಗಳು ಪ್ರಗತಿ ಹಂತದಲ್ಲಿವೆ. ನೀಲೇಶ್ವರ-ತಳಿಪರಂಬ ರೀಚ್‍ನಲ್ಲಿ ಜಿಲ್ಲೆಯಲ್ಲಿ ಬರುವ ನೀಲೇಶ್ವರ-ತಳಿಪರಂಬ ರೀಚ್‍ನಲ್ಲಿ, ಜಿಲ್ಲೆಯಲ್ಲಿ ಬರುವ ನೀಲೇಶ್ವರ-ಕಾಲಿಕ್ಕಡವ್ ಭಾಗದಲ್ಲಿ ಇದೇ ನಿರ್ಮಾಣ ಪ್ರಗತಿ ಹಂತದಲ್ಲಿದೆ. ಸೆಪ್ಟೆಂಬರ್‍ನಲ್ಲಿ ಈ ರೀಚ್‍ಗಳು ಪೂರ್ಣವಾಗುವ ನಿರೀಕ್ಷೆ ಇದೆ.
ಕುಂಬಳೆ ಟೋಲ್ ವಿವಾದ:
ಈ ಮಧ್ಯೆ ಹೆದ್ದಾರಿಗೆ ಸಂಬಂಧಿಸಿ ಕುಂಬಳೆ ಕೇಂದ್ರೀಕರಿಸಿ ಹೊಸ ಟೋಲ್ ಬೂತ್ ನಿರ್ಮಿಸುವ ಕೆಲಸ ತೆರೆಮರೆಯಲ್ಲಿ ಆರಂಭಗೊಂಡಿದೆ. ಈಗಾಗಲೇ ಕುಂಬಳೆ ಸೇತುವೆ ಪರುಇಸರದಲ್ಲಿ ಇದಕ್ಕಾಗಿ ಕಾಮಗಾರಿಗಳು ರಾತ್ರಿ ವೇಳೆ ಆರಂಭಗೊಂಡಿದೆ. ಹೆದ್ದಾರಿ ನಿಯಮಾನುಸಾರ 40 ಕಿಲೋಮೀಟರ್ ವ್ಯಾಪ್ತಿಯಲ್ಲಿ ಎರಡೆರಡು ಟೋಲ್ ಬೂತ್ ನಿರ್ಮಿಸುವಂತಲ್ಲ. ತಲಪ್ಪಾಡಿಯಲ್ಲಿ ಈಗಾಗಲೇ ಒಂದು ಟೋಲ್ ಬೂತ್ ಕಾರ್ಯನಿರ್ವಹಿಸುತ್ತಿದ್ದು, ಕುಂಬಳೆಗೆ ಕೇವಲ 25 ಕಿಲೋಮೀಟ್ ದೂರದಲ್ಲಿರುತ್ತಾ ಕುಂಬಳೆಯಲ್ಲಿ ಜನರನ್ನು ವಂಚಿಸಿ ಜನಪ್ರತಿನಿಧಿಗಳನ್ನು ಒಳಗೊಳಿಸಿ ಈ ಟೋಲ್ ನಿರ್ಮಿಸಲಾಗುತ್ತಿದೆ ಎಂಬ ಕೂಗೆದ್ದಿದೆ.




.jpg)
.jpg)
