ಪತ್ತನಂತಿಟ್ಟ: ಇಂದು(ಮೇ.14) ವೃಷಭ ಮಾಸದ ಪೂಜೆಗಳಿಗಾಗಿ ಶಬರಿಮಲೆ ದೇವಸ್ಥಾನ ತೆರೆಯಲಿದೆ. ಸಂಜೆ 5 ಗಂಟೆಗೆ ತಂತ್ರಿ ಕಂಠಾರರ್ ರಾಜೀವ ಅವರ ಸಮ್ಮುಖದಲ್ಲಿ, ಮೇಲ್ಶಾಂತಿ ಅರುಣ್‍ಕುಮಾರ್ ನಂಬೂದಿರಿ ದೇವಾಲಯದ ಗರ್ಭಗೃಹದ ಬಾಗಿಲು ತೆರೆದು ದೀಪ ಬೆಳಗಿಸುವರು.
ನಂತರ, ಹದಿನೆಂಟು ಮೆಟ್ಟಿಲುಗಳ ಕೆಳಗಿನ ಯಜ್ಞಕುಂಡದಲ್ಲಿ ಅಗ್ನಿಸ್ಪರ್ಶ ನಡೆಸಲಾಗುತ್ತದೆ. ವೃಷಭ ಮಾಸದ 1ನೇ ತಾರೀಖಿನಂದು ಬೆಳಿಗ್ಗೆ 5 ಗಂಟೆಗೆ ದೇವಾಲಯ ತೆರೆಯುತ್ತದೆ. ಭಕ್ತರಿಗೆ ಆರಾಮದಾಯಕ ಮತ್ತು ಸುರಕ್ಷಿತ ತೀರ್ಥಯಾತ್ರೆಯನ್ನು ಖಚಿತಪಡಿಸಿಕೊಳ್ಳಲು ತಿರುವಾಂಕೂರು ದೇವಸ್ವಂ ಮಂಡಳಿ ಮತ್ತು ಸರ್ಕಾರ ಎಲ್ಲಾ ಸಿದ್ಧತೆಗಳನ್ನು ಪೂರ್ಣಗೊಳಿಸಿದೆ. ಮೇ 19 ರಂದು ವೃಷಭ ಮಾಸದ ಪೂಜೆಗಳನ್ನು ಮುಗಿಸಿದ ನಂತರ ರಾತ್ರಿ 10 ಗಂಟೆಗೆ ದೇವಾಲಯವನ್ನು ಮುಚ್ಚಲಾಗುತ್ತದೆ.




.jpg)
