ಮಧೂರು: ನಿರಂತರವಾಗಿ ಸುರಿಯುತ್ತಿರುವ ತೀವ್ರ ಮಳೆಯ ಕಾರಣ ಜಿಲ್ಲೆಯ ಹಲವೆಡೆ ಭಾರೀ ಅವಾಂತರಗಳು ಸೃಷ್ಟಿಯಾಗಿದ್ದು ಜನಜೀವನ ಕಳವಳಕ್ಕೊಳಗಾಗಿದೆ. ವಾಡಿಕೆಯಂತೆ ಈ ಬಾರಿಯೂ ಮಧೂರು ಶ್ರೀಮದನಂತೇಶ್ವರ ಸಿದ್ದಿವಿನಾಯಕ ಮಹಾಗಣಪತಿ ಸನ್ನಿಧಿಯೊಳಗೆ ನೀರು ನುಗ್ಗಿ ದೈನಂದಿನ ಪೂಜಾದಿಗಳಿಗೆ ತೊಂದರೆ ಸೃಷ್ಟಿಯಾಯಿತು.
ಗುರುವಾರ ಹಗಲು ಅಲ್ಪ ವಿರಾಮದಂತೆ ಕಂಡುಬಂದರೂ ರಾತ್ರಿಯಿಂದ ಹನಿಗಡಿಯದೆ ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದ ಮಧೂರು ಸನ್ನಿಧಿಯೊಳಗೆ ನೀರು ಪ್ರವೇಶಿಸಿತು. ನಿನ್ನೆಯಷ್ಟೇ ದೃಢಕಲಶ ವಿಧಿವಿಧಾನಗಳು ನಡೆದಿರುವ ಮಧ್ಯೆ ನೀರು ನುಗ್ಗಿರುವುದರಿಂದ ವಿಧಿವಿಧಾನಗಳ ಪರಿಕರಗಳ ವಿಲೇವಾರಿಗಳಲ್ಲಿ ತುರ್ತು ಕ್ರಮ ಕೈಗೊಳ್ಳಬೇಕಾಯಿತು. ಭಕ್ತಾಧಿಗಳ ದೇವರ ದರ್ಶನಕ್ಕೂ ಸಮಸ್ಯೆ ಉಂಟಾಯಿತು.




