ಚೆಂಗನ್ನೂರು: ಪಾಂಡನಾಡು ಸ್ವಾಮಿ ವಿವೇಕಾನಂದ ಗ್ರಾಮ ಸೇವಾ ಸಮಿತಿಯು ಸೇವೆಯ ಹೊಸ ಅಧ್ಯಾಯವನ್ನು ತೆರೆದಿದೆ. ಸಮಿತಿಯ ನೇತೃತ್ವದಲ್ಲಿ ಕೃಷ್ಣಪ್ರಿಯ ಬಾಲಶ್ರಮದ ಎರಡನೇ ಹಂತದ ಕಾಮಗಾರಿಗೆ ಶಂಕುಸ್ಥಾಪನೆಯನ್ನು ಆರ್‍ಎಸ್‍ಎಸ್ ದಕ್ಷಿಣ ಕೇರಳ ಪ್ರಾಂತಪ್ರಚಾರಕ ಎಸ್. ಸುದರ್ಶನನ್ ನಿರ್ವಹಿಸಿದರು.
ಮಹಿಳಾ ಸಬಲೀಕರಣದ ಭಾಗವಾಗಿ ಡೇ ಕೇರ್ ಸೆಂಟರ್, ವೃದ್ಧರ ಆರೈಕೆ ಕೇಂದ್ರ, ಉಪಶಮನ ಆರೈಕೆ ಚಟುವಟಿಕೆಗಳು, ಉದ್ಯೋಗ ಕೌಶಲ್ಯ ಅಭಿವೃದ್ಧಿ ಕೇಂದ್ರ ಮತ್ತು ಉದ್ಯೋಗ ಉದ್ಯಮಶೀಲತೆ ತರಬೇತಿ ಮತ್ತು ಕ್ರೀಡಾ ಕಲಿಕಾ ಕೇಂದ್ರವನ್ನು ಒಳಗೊಂಡಿರುವ "ನರೇಂದ್ರಂ" ಯೋಜನೆಯು ಪ್ರಾರಂಭವಾಗಲಿದೆ.
ಉದ್ಘಾಟನೆ ನಿರ್ವಹಿಸಿ ಮಾತನಾಡಿದ ಎಸ್. ಸುದರ್ಶನನ್ ಅವರು, ಭಾರತೀಯ ಜೀವನ ತತ್ವಶಾಸ್ತ್ರವು ಅತ್ಯುತ್ತಮವಾದುದು ಎಂದು ಹೇಳಿದರು. ಭಾರತವು ನಮ್ಮ ಜೀವನವನ್ನು ಇತರರ ಒಳಿತಿಗಾಗಿ ಮುಡಿಪಾಗಿಡಲು ಕಲಿಸುತ್ತದೆ. ತಂಡದ ಕೆಲಸ ಇದಾಗಿದೆ ಎಂದರು.
ನರೇಂದ್ರಂ ಯೋಜನೆಯು ಅಂತಹ ಒಂದು ದೃಷ್ಟಿಕೋನವನ್ನು ತಿಳಿಸುತ್ತದೆ. ದೇಶದ ಸಾಮಾಜಿಕ, ಸಾಂಸ್ಕøತಿಕ ಮತ್ತು ಆರ್ಥಿಕ ಪ್ರಗತಿಯೇ ಗುರಿ. ನಾವೆಲ್ಲರೂ ಈ ಯೋಜನೆಯನ್ನು ನಮ್ಮದೇ ಆದ ಕೆಲಸ ಎಂದು ಭಾವಿಸಿ ಯಶಸ್ವಿಗೊಳಿಸಬೇಕು ಎಂದು ಸುದರ್ಶನನ್ ಹೇಳಿದರು. ಸಂಘದ ಶತಮಾನೋತ್ಸವವಾದ 2025 ರ ವೇಳೆಗೆ ಈ ಯೋಜನೆಯನ್ನು ಪೂರ್ಣಗೊಳಿಸುವುದು ಆಯೋಜಕರ ಗುರಿಯಾಗಿದೆ.






