ಮಂಜೇಶ್ವರ: ವಿದ್ಯಾರ್ಥಿಗಳು ಜ್ಞಾನಾರ್ಜನೆಗೈದು ಉತ್ತಮ ನಾಗರಿಕರಾಗುವುದರ ಜೊತೆಗೆ ಸೇವಾ ಮನೋಭಾವವನ್ನು ಕೂಡಾ ತಮ್ಮ ಬದುಕಿನಲ್ಲಿ ರೂಢಿಸಿಕೊಳ್ಳಬೇಕು. ಈ ನಿಟ್ಟಿನಲ್ಲಿ ಮೀಯಪದವು ಶ್ರೀ ವಿದ್ಯಾವರ್ಧಕ ಹೈಯರ್ ಸೆಕೆಂಡರಿ ಶಾಲೆಯ ವಿದ್ಯಾರ್ಥಿಗಳು ರಾಷ್ಟ್ರೀಯ ಸೇವಾ ಯೋಜನೆಯ ಮೂಲಕ ಮಾಡಿದ ಸೇವಾ ಕಾರ್ಯ ಸ್ತುತ್ಯರ್ಹವಾದುದು ಎಂದು ಮಂಜೇಶ್ವರ ಶಾಸಕ ಎ. ಕೆ. ಎಂ. ಅಶ್ರಫ್ ಅಭಿಪ್ರಾಯಪಟ್ಟರು.
ಮೀಯಪದವು ಶ್ರೀ ವಿದ್ಯಾವರ್ಧಕ ಹೈಯರ್ ಸೆಕೆಂಡರಿ ಶಾಲೆಯ ರಾಷ್ಟ್ರೀಯ ಸೇವಾ ಯೋಜನಾ ಘಟಕವು ವಿದ್ಯಾರ್ಥಿಗೆ ನಿರ್ಮಿಸಿಕೊಟ್ಟ ಮನೆಯ ಕೀಲಿ ಕೈಯನ್ನು ಹಸ್ತಾಂತರಿಸಿ ಅವರು ಮಾತನಾಡುತ್ತಿದ್ದರು.ರಾಷ್ಟ್ರೀಯ ಸೇವಾ ಯೋಜನೆಯು ಮನೆಯನ್ನು ನಿರ್ಮಿಸಿಕೊಡುವುದರ ಮೂಲಕ ನಿರಾಶ್ರಿತರಿಗೆ ನೆರಳಾಗಿದೆ. ಈ ಘಟಕದಿಂದ ಇನ್ನಷ್ಟು ಸಮಾಜಮುಖಿ ಕೆಲಸ ಮಾಡುವಂತಾಗಲಿ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಮೀಂಜ ಗ್ರಾಮ ಪಂಚಾಯತಿ ಅಧ್ಯಕ್ಷ ಸುಂದರಿ.ಆರ್.ಶೆಟ್ಟಿ ಅವರು ರಾಷ್ಟ್ರೀಯ ಸೇವಾ ಯೋಜನೆಯ ಸಮಾಜಮುಖಿ ಕೆಲಸ ಕಾರ್ಯಗಳ ವ್ಯಾಪ್ತಿ ಇನ್ನಷ್ಟು ವಿಸ್ತಾರಗೊಳ್ಳಲಿ ಎಂದರು.
ಮೀಂಜ ಗ್ರಾಮ ಪಂಚಾಯತಿ ಉಪಾಧ್ಯಕ್ಷ ಜಯರಾಮ ಬಲ್ಲಂಗುಡೇಲು, ಆರೋಗ್ಯ ಮತ್ತು ವಿದ್ಯಾಭ್ಯಾಸ ಸ್ಥಾಯೀ ಸಮಿತಿ ಅಧ್ಯಕ್ಷ ಸರಸ್ವತಿ, ವಾರ್ಡು ಸದಸ್ಯ ಮಿಸಿರಿಯ, ರುಕಿಯಾ ಸಿದ್ದಿಕ್, ಕುಸುಮ ಮೋಹನ್, ಜನಾರ್ಧನ ಪೂಜಾರಿ, ರಾಷ್ಟ್ರೀಯ ಸೇವಾ ಯೋಜನೆಯ ವಿಭಾಗೀಯ ಸಂಚಾಲಕರಾದ ಹರಿದಾಸ್. ವಿ, ಜಿಲ್ಲಾ ಸಂಚಾಲಕರಾದ ಕೆ. ಎನ್. ಮನೋಜ್ ಕುಮಾರ್, ಕ್ಲಸ್ಟರ್ ಸಂಚಾಲಕ ಶ್ರೀನಾಥ್. ಇ, ಮೀಯಪದವು ಶ್ರೀ ವಿದ್ಯಾವರ್ಧಕ ಹೈಯರ್ ಸೆಕೆಂಡರಿ ಶಾಲೆಯ ಸಂಚಾಲಕ ಡಾ. ಜಯಪ್ರಕಾಶ ನಾರಾಯಣ, ಮುಖ್ಯ ಶಿಕ್ಷಕಿ ಮೃದುಲ. ಕೆ. ಎಂ, ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ಕೃಷ್ಣ ಪ್ರಸಾದ್, ಹಿರಿಯ ಶಿಕ್ಷಕ ರವಿಲೋಚನ. ಸಿ. ಎಚ್, ಸ್ಕೂಲ್ ಪ್ರೊಟೆಕ್ಷನ್ ಗ್ರೂಪಿನ ಸಂಚಾಲಕ ಚಂದ್ರಶೇಖರ. ಎಂ, ಸಲಹೆಗಾರ ಇಬ್ರಾಹಿಂ ಹೊನ್ನಕಟ್ಟೆ , ಹಳೆ ವಿದ್ಯಾರ್ಥಿ ಸಂಘದ ಪ್ರತಿನಿಧಿ ಶಶಿಕುಮಾರ್ ಕುಳೂರು, ರಜಾಕ್ ಮುಂತಾದವರು ಶುಭಾಶಂಸನೆಗೈದರು. ಮನೆಯ ಫಲಾನುಭವಿಯಾದ ಅಬ್ದುಲ್ ರಜಾಕ್ ತಮ್ಮ ಅನಿಸಿಕೆಗಳನ್ನು ಹಂಚಿಕೊಂಡರು
ಪ್ರಾಂಶುಪಾಲ ರಮೇಶ್. ಕೆ. ಎನ್ ಸ್ವಾಗತಿಸಿ, ರಾಷ್ಟ್ರೀಯ ಸೇವಾ ಯೋಜನೆಯ ಶಾಲಾ ಮಟ್ಟದ ಸಂಚಾಲಕ ರಾಜೇಂದ್ರನ್. ಕೆ. ಪಿ ವಂದಿಸಿದರು. ಶಿಕ್ಷಕ ಹರೀಶ. ಜಿ ನಿರೂಪಿಸಿದರು.

.jpg)
.jpg)
