ಕುಂಬಳೆ: ಶಿರಿಯ ಒಳಯಂ ಜುಮಾ ಮಸೀದಿ ಉರುಸ್ ಸಮಾರಂಭದ ಪ್ರಚಾರಾರ್ಥ ಅಳವಡಿಸಲಾಗಿದ್ದ ಪ್ಲೆಕ್ಸ್ ಬೋರ್ಡ್ ಹರಿದು ನಾಶಗೊಳಿಸಿದ ಪ್ರಕರಣಕ್ಕೆ ಸಂಬಂಧಿಸಿ ಕುಬಣೂರು ಪಚ್ಚಂಬಳ ನಿವಾಸಿ ಫಾಯಿಸ್ ಎಂಬಾತನ ವಿರುದ್ಧ ಕುಂಬಳೆ ಠಾಣೆ ಪೊಲೀಸರು ಜಾಮೀನುರಹಿತ ಕೇಸು ದಾಖಲಿಸಿಕೊಂಡಿದ್ದಾರೆ. ಆರೋಪಿ ತಲೆಮರೆಸಿಕೊಂಡಿದ್ದಾನೆ. ಅಡ್ಕ ನಿವಾಸಿ ಅಬ್ದುಲ್ ಸತ್ತರ್ ಎಂಬವರ ದೂರಿನ ಮೇರೆಗೆ ಈ ಕೇಸು. ಅಡ್ಕ ವೀರನಗರದಲ್ಲಿ ಅಳವಡಿಸಲಾಗಿದ್ದ ಫ್ಲೆಕ್ಸ್‍ಬೋರ್ಡನ್ನು ಮೇ 18ರಂದು ರಾತ್ರಿ ಹರಿದು ನಾಶಗೊಳಿಸಿ, ಇತರ ಸಮುದಾಯದ ಮಧ್ಯೆ ಗಲಭೆಗೆ ಯತ್ನಿಸಿದ್ದನು. ಪ್ಲೆಕ್ಸ್ ಹರಿಯುವ ದೃಶ್ಯವನ್ನು ಪ್ರತ್ಯಕ್ಷ ಕಂಡವರು ಆರೋಪಿಯ ಗುರುತು ಪತ್ತೆಹಚ್ಚಿ ಪೊಲೀಸರಿಗೆ ಮಾಹಿತಿ ನೀಡಿದ್ದರು. ಕೋಮು ಗಲಭೆ ಸೃಷ್ಟಿಸುವ ಯತ್ನದಲ್ಲಿ ಕೃತ್ಯವೆಸಗಿರುವ ಬಗ್ಗೆ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ.

