ಮಂಜೇಶ್ವರ: ಕೊಡ್ಲಮೊಗರು ಶ್ರೀ ವಾಣಿವಿಜಯ ಹೈಯರ್ ಸೆಕೆಂಡರಿ ಶಾಲೆ 2024-25 ನೇ ಶೈಕ್ಷಣಿಕ ವರ್ಷದ ಎಸ್. ಎಸ್. ಎಲ್. ಸಿ ಪರೀಕ್ಷೆಯಲ್ಲಿ ಉತ್ತಮ ಫಲಿತಾಂಶದೊಂದಿಗೆ 5 ಮಕ್ಕಳು ಎಲ್ಲಾ ವಿಷಯಗಳಲ್ಲಿಯೂ ಎ ಪ್ಲಸ್ ಪಡೆದಿರುತ್ತಾರೆ. ಭುವನ್, ಚರಣ್ ರಾಜ್, ರಹಾನಾ, ರಿಯಾ ಮತ್ತು ವೈಷ್ಣವಿ ಎಚ್ ಶೆಟ್ಟಿ ಎಲ್ಲಾ ವಿಷಯಗಳಲ್ಲಿಯೂ ಎ ಪ್ಲಸ್ ಗಳಿಸಿಕೊಂಡಿದ್ದಾರೆ. ಮೂವರು ವಿದ್ಯಾರ್ಥಿಗಳು 9 ವಿಷಯಗಳಲ್ಲಿ ಎ ಪ್ಲಸ್ ಪಡೆದರೆ ಇಬ್ಬರು ವಿದ್ಯಾರ್ಥಿಗಳು 8 ವಿಷಯಗಳಲ್ಲಿ ಎ ಪ್ಲಸ್ ದಾಖಲಿಸಿದ್ದಾರೆ. ವಿದ್ಯಾರ್ಥಿಗಳ ಸಾಧನೆಯನ್ನು ಶಾಲಾ ಪ್ರಬಂಧಕರು, ಪ್ರಾಂಶುಪಾಲರು, ಮುಖ್ಯೋಪಾಧ್ಯಾಯಿನಿ, ರಕ್ಷಕ- ಶಿಕ್ಷಕ ಸಂಘ, ಮಾತೃ ಸಂಘ, ಅಧ್ಯಾಪಕ ಹಾಗೂ ಅಧ್ಯಾಪಕೇತರ ಸಿಬ್ಬಂದಿ ವರ್ಗದವರು ಅಭಿನಂದಿಸಿದ್ದಾರೆ.





