ಕಾಸರಗೋಡು: ಕಾಸರಗೋಡು ಶ್ರೀ ಮಲ್ಲಿಕಾರ್ಜುನ ದೇವಸ್ಥಾನದಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿಜಿಯವರು ಪ್ರಮಾಣ ವಚನ ಸ್ವೀಕರಿಸಿದ ತಾರೀಕಿನಂದು ವಿವಿಧ ಕಾರ್ಯಕ್ರಮಗಳಲ್ಲಿ ಮುಂಚೂಣಿಯಲ್ಲಿ ಕಾರ್ಯ ನಿರ್ವಹಿಸುತ್ತಿರುವ "ಮೋದಿ ಫ್ಯಾನ್ಸ್ ಕಾಸರಗೋಡು" ಅವರು ಮೋದಿಜಿಯವರ ಹೆಸರಿನಲ್ಲಿ ಕಳೆದ 11 ವರ್ಷದಿಂದ ಪ್ರತಿ ತಿಂಗಳು ವಿಶೇಷ ಕಾರ್ತಿಕ ಪೂಜೆ ನಡೆಸುತ್ತಾ ಬಂದಿರುತ್ತಿದ್ದು, ಮೇ. 9 ರಂದು ಯೋಧರ ಆತ್ಮಸ್ಥೈರ್ಯಕ್ಕಾಗಿ ಹಾಗೂ ಭಾರತೀಯರ ರಕ್ಷಣೆಗಾಗಿ ವಿಶೇಷ ಪೂಜೆ ನಡೆಸಲಾಯಿತು.
ಶ್ರೀ ಕ್ಷೇತ್ರದ ಪ್ರಧಾನ ಅರ್ಚಕ ಶಿವಶಂಕರ ಅಡಿಗ ವಿಶೇಷ ಪ್ರಾರ್ಥನೆ ನೆರವೇರಿಸಿದರು. ಪೂಜಾ ಕಾರ್ಯದಲ್ಲಿ ಕಾಸರಗೋಡು ನಗರಸಭಾ ಸದಸ್ಯೆ ಶ್ರೀಲತಾ ಟೀಚರ್, ಧಾರ್ಮಿಕ, ಸಾಂಸ್ಕøತಿಕ, ಸಾಮಾಜಿಕ ಮುಂದಾಳು ಡಾ. ಕೆ.ಎನ್. ವೆಂಕಟ್ರಮಣ ಹೊಳ್ಳ, ಪುರಂದರ ಶೆಟ್ಟಿ, ಕಿಶೋರ್ ಕುಮಾರ್, ಕೆ.ಎನ್. ರಾಮಕೃಷ್ಣ ಹೊಳ್ಳ, ತುಕರಾಮ ಆಚಾರ್ಯ ಕೆರೆಮನೆ, ಪ್ರಮೋದ್ ಕುಮಾರ್, ಗಣೇಶ್ ಬೀರಂತಬೈಲ್, ನಾಮದೇವ ಪೈ, ಮನಮೋಹನ ಆಚಾರ್ಯ ತಾಳಿಪಡ್ಪು, ಸೌಮ್ಯ, ಶಂಕರನಾರಾಯಣ ಹೊಳ್ಳ, ಪ್ರೇಮಾ ಹಾಗೂ ಸ್ಥಳೀಯರು ಉಪಸ್ಥಿತರಿದ್ದರು.




.jpg)
