HEALTH TIPS

ಸಮುದ್ರಕ್ಕೆ ಹಾರಿ ಮಹಿಳೆ ಆತ್ಮಹತ್ಯೆ: ಹೃದಯ ಗೆದ್ದ ಪೊಲೀಸ್ ರಕ್ಷಣಾ ಸಾಹಸ

ಮುಂಬೈ: 43 ವರ್ಷದ ಮಹಿಳೆಯೊಬ್ಬರು ಮುಂಬೈನ ಮೆರೈನ್ ಡ್ರೈವ್ ವಾಯುವಿಹಾರ ಪಥದಿಂದ ಸಮುದ್ರಕ್ಕೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸ್ಥಳದಲ್ಲಿದ್ದ ನೂರಾರು ಜನರು ಈ ಘಟನೆಯನ್ನು ಸುಮ್ನೆ ನೋಡುತ್ತಿದ್ದರು.

ಇನ್ನೂ ಕೆಲವರು ಅದನ್ನು ತಮ್ಮ ಮೊಬೈಲ್ ಫೋನ್‌ಗಳಲ್ಲಿ ರೆಕಾರ್ಡ್ ಮಾಡಿಕೊಂಡಿದ್ದಾರೆ.

ಸೋಮವಾರ ಸಂಜೆ 7.30ಕ್ಕೆ ಸಮುದ್ರದಲ್ಲಿ ಬಿರುಗಾಳಿ ಬೀಸುತ್ತಿದ್ದಾಗ ಹೆಚ್ಚಿನ ಪ್ರಮಾಣದಲ್ಲಿ ಉಬ್ಬರವಿಳಿತ ಇದ್ದಾಗಲೇ ಮಹಿಳೆ ಸಮುದ್ರಕ್ಕೆ ಹಾರಿದ್ದಾರೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ಮಂಗಳವಾರ ತಿಳಿಸಿದ್ದಾರೆ.

ಮೆರೈನ್ ಡ್ರೈವ್‌ನ ವಾಯುವಿಹಾರ ಪಥದ ಬಳಿಯ ಸಮುದ್ರವು ಬಹಳಷ್ಟು ಆಳವಾಗಿದೆ.

ಕಣ್ಣೆದುರೇ ಮಹಿಳೆ ನೀರಿಗೆ ಬಿದ್ದರೂ ಜನ ನಿಂತು ನೋಡುತ್ತಿದ್ದರೆ, ಸಂಚಾರ ಪೊಲೀಸ್ ಕಾನ್‌ಸ್ಟೆಬಲ್ ಸುರೇಶ್ ಭಿಕಾಜಿ ಗೋಸಾವಿ ಎಂಬಾತ ಮಹಿಳೆಯನ್ನು ರಕ್ಷಿಸಲು ಸಮುದ್ರಕ್ಕೆ ಹಾರಿದರು.

ಮಹಿಳೆಯನ್ನು ಗೋಸಾಮಿ ಸಮುದ್ರದಿಂದ ಹೊರಗೆ ತರುವಲ್ಲಿ ಯಶಸ್ವಿಯಾದರು. ಮಹಿಳೆ ಬಹಳಷ್ಟು ನೀರು ಕುಡಿದಿದ್ದರು. ಸಮೀಪದಲ್ಲಿ ಸೇರಿದ್ದ ಜನರ ಸಹಾಯದಿಂದ ನೀರನ್ನು ಹೊರತೆಗೆದು, ಸಿಪಿಆರ್ ಮಾಡಲು ಯತ್ನಿಸಿದರು.

ಸುಮಾರು 4 ಲೀಟರ್‌ನಷ್ಟು ನೀರನ್ನು ಹೊರತೆಗೆದ ನಂತರ ಮಹಿಳೆಯನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ವೇಳೆ ಮಹಿಳೆ ಮೃತಪಟ್ಟರು.

ಮೃತ ಮಹಿಳೆಯ ಕುಟುಂಬ ಸದಸ್ಯರನ್ನು ಪತ್ತೆಹಚ್ಚಲು ಪೊಲೀಸರು ಪ್ರಯತ್ನಿಸುತ್ತಿದ್ದಾರೆ.

ಕಾನ್‌ಸ್ಟೆಬಲ್ ಗೋಸಾಮಿ ಅವರ ಸಾಹಸವನ್ನು ಜನ ಕೊಂಡಾಡಿದ್ದಾರೆ. ₹5,000 ಬಹುಮಾನ ನೀಡಿ ಸನ್ಮಾನಿಸಲಾಯಿತು ಎಂದು ಪೊಲೀಸ್ ಅಧಿಕಾರಿ ಹೇಳಿದ್ದಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries