ಕಲ್ಪೆಟ್ಟ: ವಯನಾಡಿನ ಮೆಪ್ಪಾಡಿಯಲ್ಲಿರುವ ತೊಲೈರಾಮ್ ಕಂಡಿಯಲ್ಲಿ ರೆಸಾರ್ಟ್‍ನ ಶೆಡ್ ಕುಸಿದು ಪ್ರವಾಸಕ್ಕೆ ತೆರಳಿದ್ದ ಯುವತಿಯೊಬ್ಬಳು ಸಾವನ್ನಪ್ಪಿದ್ದಾಳೆ. 900 ವೆಂಚರ್ಸ್ ರೆಸಾರ್ಟ್‍ನಲ್ಲಿ ನಿರ್ಮಿಸಲಾಗುತ್ತಿದ್ದ ಟೆಂಟ್ ಕುಸಿದು ಬಿದ್ದು ಅವಘಡ ಘಿಸಿದೆ. ಮೃತರನ್ನು ನಿಲಂಬೂರಿನ ಅಕಂಬಾಡಂ ನಿವಾಸಿ ನೀಶ್ಮಾ (24) ಎಂದು ಗುರುತಿಸಲಾಗಿದೆ. ಅವರು ಮೇಕಪ್ ಕಲಾವಿದರು ಎಂದು ವರದಿಯಾಗಿದೆ. ಹುಲ್ಲಿನಿಂದ ಮತ್ತು ಮರದ ಕಂಬಗಳಿಂದ ಮಾಡಲ್ಪಟ್ಟಿದ್ದ ಡೇರೆ ಕುಸಿದು ಬಿದ್ದಿದೆ.
ನಿನ್ನೆ ಆಗಮಿಸಿದ 16 ಸದಸ್ಯರ ಪ್ರವಾಸಿ ಗುಂಪಿನಲ್ಲಿ ಒಬ್ಬರು ಸಾವನ್ನಪ್ಪಿದರು. ಪ್ರತಿಯೊಂದು ಶೆಡ್‍ನಲ್ಲಿ ಎರಡು ಡೇರೆಗಳಿದ್ದವು. ಶೆಡ್ ಕುಸಿದಾಗ ನೀಶ್ಮಾ ಸಿಕ್ಕಿಹಾಕಿಕೊಂಡರು. ಮೃತದೇಹವನ್ನು ಮೂಪೆನ್ಸ್ ವೈದ್ಯಕೀಯ ಕಾಲೇಜಿಗೆ ಸ್ಥಳಾಂತರಿಸಲಾಯಿತು.





