ಮುಳ್ಳೇರಿಯ : ಮುಳ್ಳೇರಿಯಾದ 110ಕೆ.ವಿ ಸಬ್‍ಸ್ಟೇಶನ್‍ನಲ್ಲಿ ಉಂಟದ ಬೆಂಕಿ ಆಕಸ್ಮಿಕದಲ್ಲಿ ಸಬ್‍ಸ್ಟೇಶನ್ ಯಾರ್ಡಿನ ಪೊಟೆನ್ಶಿಯಲ್ ಟ್ರಾನ್ಸ್‍ಫಾರ್ಮರ್ ಸಂಪೂರ್ಣ ಹಾನಿಗೀಡಾಗಿದೆ. ಯಾರ್ಡಿನಲ್ಲಿ ಕರ್ತವ್ಯದಲ್ಲಿದ್ದ ಸಿಬ್ಬಂದಿ ಬೆಂಕಿ ಶಮನಗೊಳಿಸಲು ಯತ್ನಿಸಿದರೂ, ಸಾಧ್ಯವಾಗದಿದ್ದಾಗ ಅಗ್ನಿಶಾಮಕ ದಳ ಸಿಬ್ಬಂದಿ ಆಗಮಿಸಿ ಬೆಂಕಿ ನಂದಿಸಿದ್ದರು.
ಟ್ರಾನ್ಸ್‍ಫಾರ್ಮರ್‍ನಲ್ಲಿ ಬೆಂಕಿ ಕಾಣಿಸಿಕೊಮಡಿದ್ದ ಹಿನ್ನೆಲೆಯಲ್ಲಿ ಚೆರ್ಕಳ, ಮುಳ್ಳೇರಿಯ, ಬದಿಯಡ್ಕ, ಎರಿಞÂಪುಯ, ಕುತ್ತಿಕ್ಕೋಲ್ ಪ್ರದೇಶಕ್ಕೆ ತಾಸುಗಳ ಕಾಳ ವಿದ್ಯುತ್ ಸಂಪರ್ಕ ಕಡಿತಗೊಂಡಿತ್ತು.

