ಕಾಸರಗೋಡು: ಬಿರುಸಿನ ಮಳೆಯಿಂದ ಹಾನಿಗೀಡಾಗಿರುವ ಪ್ರದೇಶಗಳಿಗೆ ರಾಷ್ಟ್ರೀಯ ವಿಪತ್ತು ನಿವಾರಣಾ ತಂಡ(ಎನ್‍ಡಿಆರ್‍ಎಫ್) ಭೇಟಿ ನೀಡಿ ಪರಾಮರ್ಶೆ ನಡೆಸಿತು. ರಾಷ್ಟ್ರೀಯ ಹೆದ್ದಾರಿ ನಿರ್ಮಾಣವಾಗುತ್ತಿರುವ ನೀಲೇಶ್ವರ ನಗರಸಭೆಯ ಚಾತಮತ್, ಪೊಡತುರುತ್ತಿ, ಮಯಿಚ್ಚ, ಪಾಲಾಯಿ, ಹೆದ್ದಾರಿ ಕಾಮಗಾರಿ ನಡೆಯುತ್ತಿರುವ ಚೆರುವತ್ತೂರು ವೀರಮಲಕುನ್ನು, ಮಟ್ಟಲೈ ಕುನ್ನು ಪ್ರದೇಶಗಳಿಗೆ ಎನ್‍ಡಿಆರ್‍ಎಫ್ ತಂಡ ಭೇಟಿ ನೀಡಿತು. ತಂಡದ ಕಮಾಂಡರ್ ಅರ್ಜುನ್ ಪಾಲ್ ರಜಪೂತ್ ಮತ್ತು ಎನ್‍ಡಿಆರ್‍ಎಫ್ ಚೆನ್ನೈ ಆರ್ಕೋನಮ್ 4 ನೇ ಘಟಕದ ಎಸ್.ಐ ವಿಕಾಸ್ ಯಾದವ್ ನೇತೃತ್ವದ 26 ಮಂದಿ ಸದಸ್ಯರ ತಂಡ ಜಿಲ್ಲೆಗಾಗಮಿಸಿದೆ.
ಹೊಸದುರ್ಗ ತಹಸೀಲ್ದಾರ್ ಟಿ.ಜಯಪ್ರಸಾದ್, ಕಾಸರಗೋಡು ಮಣ್ಣು ತಪಾಸಣಾ ಸಹಾಯಕ ನಿರ್ದೇಶಕ ಪಿ.ವಿ. ಪ್ರಮೋದ್, ಭೂವಿಜ್ಞಾನಿ ಎಸ್.ಸೂರಜ್, ಚಂದೇರಾ ಪೆÇಲೀಸ್ ಇನ್ಸ್ ಪೆಕ್ಟರ್ ಕೆ.ಪ್ರಶಾಂತ್, ವಿಪತ್ತು ನಿರ್ವಹಣಾ ಇಲಾಖೆ ಉಪ ತಹಸೀಲ್ದಾರ್ ಪಿ.ವಿ.ತುಳಸಿರಾಜ್, ನಗರಸಭಾ ಅಧ್ಯಕ್ಷೆ ಟಿ.ವಿ.ಶಾಂತಾ, ಕೌನ್ಸಿಲರ್ ಪಿ.ಪಿ. ಲತಾ, ಮತ್ತು ಚೆರುವತ್ತೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಭೇಟಿ ಸಂದರ್ಭ ಗ್ರಾಪಂ ಅಧ್ಯಕ್ಷೆ ಸಿ.ವಿ. ಪ್ರಮೀಳಾ, ಕಾರ್ಯದರ್ಶಿ ವನಜ ಮತ್ತು ಇತರರು ಉಪಸ್ಥಿತರಿದ್ದರು.
ಕಾಸರಗೋಡಲ್ಲಿ ರೆಡ್ ಅಲರ್ಟ್:
ಕಾಸರಗೋಡು ಜಿಲ್ಲೆಯಲ್ಲಿ ಮೇ 29 ಮತ್ತು 30 ರಂದು ಕೇಂದ್ರ ಹವಾಮಾನ ಇಲಾಖೆ ರೆಡ್ ಅಲರ್ಟ್ ಘೋಷಿಸಿದೆ. ಮಳೆ ತೀವ್ರವಾಗುತ್ತಿರುವ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ಜಿಲ್ಲೆಯ ವೃತ್ತಿಪರ ಕಾಲೇಜುಗಳು ಸೇರಿದಂತೆ ಶಿಕ್ಷಣ ಸಂಸ್ಥೆಗಳಿಗೆ ಮೇ 29ರಂದು ಜಿಲ್ಲಾಧಿಕರಿಕೆ. ಇನ್ಬಾಶೇಖರ್ ರಜೆ ಘೋಷಿಸಿದ್ದಾರೆ. ಶಿಕ್ಷಣ ಸಂಸ್ಥೆಗಳು, ಬೋಧನಾ ಕೇಂದ್ರಗಳು, ವಿಶೇಷ ತರಗತಿಗಳು, ಅಂಗನವಾಡಿಗಳು, ಮದರಸಾಗಳಿಗೆ ರಜೆ ಅನ್ವಯವಾಗಲಿದೆ. ಪೂರ್ವನಿಗದಿತ ಪರೀಕ್ಷೆಗಳಲ್ಲಿ ಯಾವುದೇ ಬದಲಾವಣೆಗರುವುದಿಲ್ಲ. ರೆಡ್ ಅಲರ್ಟ್ ಜರಿಯಲ್ಲಿರುವುದರಿಂದ ಮೇ 29 ಮತ್ತು 30 ರಂದು ಜಿಲ್ಲೆಯಲ್ಲಿ ಕ್ವಾರಿಗಳು ಕಾರ್ಯನಿರ್ವಹಿಸದಿರುವಂತೆ ಸೂಚಿಸಲಾಗಿದೆ. ರೆಡ್ ಅಲರ್ಟ್ ಘೋಷಿಸಲಾದ ದಿನಗಳಲ್ಲಿ, ರಾಣಿಪುರಂ ಸೇರಿದಂತೆ ಜಿಲ್ಲೆಯ ಪ್ರವಾಸಿ ತಾಣಗಳನ್ನು ಮುಚ್ಚಲಗುವುದು. ಪ್ರವಾಸಿಗರಿಗೆ ಸಮುದ್ರ ಕರಾವಳಿಗೂ ಪ್ರವೇಶ ನಿರಾಕರಿಸಲಾಗಿದೆ.



