ಕಾಸರಗೋಡು: ಬಿರುಸಿನ ಮಳೆಗೆ ಜಿಲ್ಲೆಯಲ್ಲಿ ವ್ಯಾಪಕ ಹಾನಿಯುಂಟಾಗಿದೆ. ವಿದ್ಯಾನಗರದ ಜಿಲ್ಲಾ ಪಂಚಾಯಿತಿ ಕಚೇರಿ ವಠಾರದ ಬೃಹತ್ ಮರವೊಂದು ಸಂಚರಿಸುತ್ತಿದ್ದ ಕಾರಿನ ಮೇಲೆ ಬಿದ್ದು, ಹಾನಿ ಸಂಭವಿಸಿದೆ. ವಿದ್ಯುತ್ ಎಚ್.ಟಿ ಲೈನಿಗೆ ಮರಬಿದ್ದು, ತಂತಿ ರಸ್ತೆಗೆ ಬಿದ್ದಿದೆ. ತಕ್ಷಣ ವಿದ್ಯುತ್ ಸಂಪರ್ಕ ವಿಚ್ಛೇದಿಸಿ, ಕಾರಿನೊಳಗಿದ್ದ ಪವಿತ್ರನ್ ಅವರನ್ನು ಅಗ್ನಿಶಾಮಕದಳ ಸಿಬ್ಬಂದಿ ರಕ್ಷಿಸಿ ಹೊರತಂದಿದ್ದಾರೆ. ಅಣಂಗೂರು ಬೆದಿರ ತಾಣಿಯತ್ ಎಂಬಲ್ಲಿ ಆಟೋರಿಕ್ಷಾದ ಮೇಲೆ ವಿದ್ಯುತ್ ತಂತಿ ತುಂಡಾಗಿ ಬಿದ್ದಿದ್ದು, ವಿದ್ಯುತ್ ಮೊಟಕುಗೊಂಡಿದ್ದ ಪರಿಣಾಮ ದುರಂತ ತಪ್ಪಿದೆ. ಜಿಲ್ಲಧಿಕಾರಿ ಕಚೆರಿ ಹೊಂದಿರುವ ಸಿವಿಲ್ ಸ್ಟೇಶನ್ ವಠಾರದ ಕ್ಯಾಂಟೀನ್ ಬಳಿಯಿರುವ ಬೃಹತ್ ಮರವೊಂದು ಕಟ್ಟಡಕ್ಕೆ ಬಿದ್ದು, ಹಾನಿಯುಂಟಾಗಿದೆ.
ಮುಂದಿನ ನಾಲ್ಕು ದಿವಸಗಳ ಕಾಲ ಬಿರುಸಿನ ಮಳೆಯಾಗುವ ಹಾಗೂ ಸಮುದ್ರದಲ್ಲಿ ಬೃಹತ್ ಅಲೆಗಳು ಎದ್ದೇಳುವ ಸಾಧ್ಯತೆ ಹಿನ್ನೆಲೆಯಲ್ಲಿ ಜಿಲ್ಲೆಯ ನಾಗರಿಕರಿಗೆ ಹಾಗೂ ಮೀನುಗಾರರಿಗೆ ಜಾಗ್ರತಾ ನಿರ್ದೇಶ ನೀಡಲಾಗಿದೆ.



