ಕಾಸರಗೋಡು: ಕಾಸರಗೋಡು ಥಿಯೇಟ್ರಿಕಲ್ ಸೊಸೈಟಿಯು ಕೇರಳ ಸಂಗೀತ ನಾಟಕ ಅಕಾಡೆಮಿಯ ಸಹಯೋಗದಲ್ಲಿ ವಿದ್ಯಾನಗರದ ಚಿನ್ಮಯ ತೇಜಸ್ ಸಭಾಂಗಣದಲ್ಲಿ ಆಯೋಜಿಸಿದ್ದ ಎರಡು ದಿನಗಳ ಮಲಯಾಳಂ-ಕನ್ನಡ ನಾಟಕೋತ್ಸವ ಸಂಪನ್ನಗೊಂಡಿತು.
ಎರಡು ರಾತ್ರಿಗಳಲ್ಲಿ ಪ್ರದರ್ಶಿಸಲಾದ'ಜೊತೆಗಿರಿವನು ಚಂದಿರ' ಕನ್ನಡ ನಾಟಕ ಮತ್ತು 'ಪೆಣ್ ನಟನ್' ಮಲಯಾಳ ನಾಟಕ ಪ್ರೇಕ್ಷಕರ ಪ್ರಶಂಸೆಗೆ ಕಾರಣವಾಯಿತು.
ನಾಟಕ ಪ್ರದರ್ಶನಕ್ಕೂ ಮೊದಲು ಮೈಸೂರು ಜೈಲಿನಿಂದ ಕನ್ನಡ ನಾಟಕ ನಿರ್ದೇಶಕ ಮತ್ತು ನಟ ಹುಲಿಗಪ್ಪ ಕಟ್ಟಿಮನಿ ಚಿತ್ರೀಕರಿಸಿದ ಸಾಕ್ಷ್ಯಚಿತ್ರದ ಪ್ರದರ್ಶನ ನಡೆಯಿತು. ಈ ಸಂದರ್ಭ ಹುಲಿಗಪ್ಪ ಕಟ್ಟಿಮನಿ ಪ್ರೇಕ್ಷಕರೊಂದಿಗೆ ಸಂವಾದ ನಡೆಸಿದರು. ಚಲನಚಿತ್ರ ಮತ್ತು ರಂಗಭೂಮಿ ನಿರ್ದೇಶಕ ಗೋಪಿಕುತ್ತಿಕ್ಕೋಲ್, ಕಾಸರಗೋಡು ರಂಗಸಜ್ಜಿಕೆ ಕಾರ್ಯದರ್ಶಿ ಟಿ.ಎ. ಶಾಫಿ, ಕೋಶಾಧಿಕರಿ ವಕೀಲ ಟಿ.ವಿ.ಗಂಗಾಧರನ್, ಉಪಾಧ್ಯಕ್ಷ ಜಿ.ಬಿ. ವಲ್ಸನ್, ಸುಬಿನ್ ಜೋಸ್, ಉಮೇಶ್ ಶಾಲಿಯಾನ್, ಮಧುರ್ ಶೆರೀಫ್ ಮೊದಲಾದವರು ಉಪಸ್ಥಿತರಿದ್ದರು.





