ಕಾಸರಗೋಡು: ಹದದಿನೈದರ ಹರೆಯದ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ ಅಪರಾಧಿ, ಮುನ್ನಾಡ್ ಪಟ್ಟಂತಟ್ಟ ನಿವಾಸಿ ಎಚ್. ಸುರೇಶ್(34) ಎಂಬಾತನಿಗೆ ಹೊಸದುರ್ಗ ಫಾಸ್ಟ್ ಟ್ರ್ಯಾಕ್ ನ್ಯಾಯಾಲಯದ ನ್ಯಾಯಾಧೀಶ ಪಿ.ಎಂ ಸಉರೇಶ್ 52ವರ್ಷಗಳ ಕಠಿಣ ಜೈಲು ಶಿಕ್ಷೆ ಹಾಗೂ 2.21ಲಕ್ಷ ರೂ. ದಂಡ ವಿಧಿಸಿ ತೀರ್ಪು ನೀಢಿದ್ದಾರೆ. ದಂಡದ ಮೊತ್ತ ಪಾವತಿಸದಿದ್ದಲ್ಲಿ ಎರಡು ವರ್ಷ ಒಂಬತ್ತು ತಿಂಗಳ ಹೆಚ್ಚಿನ ಜೈಲು ಶಿಕ್ಷೆ ಅನುಭವಿಸುವಂತೆ ಸೂಚಿಸಲಾಗಿದೆ.
2022ರ ಓಣಂ ಉತ್ಸವದ ಸಂದರ್ಭ 15ರ ಹರೆಯದ ಬಾಲಕಿಯನ್ನು ಉತ್ಸವಕ್ಕೆ ಕರೆದೊಯ್ದು ಬೈಕಲ್ಲಿ ವಾಪಸಾಗುವ ಮಧ್ಯೆ ಮನೆ ಸನಿಹದ ರಸ್ತೆ ಅಂಚಿಗೆ ಕರೆದೊಯ್ದು ಕಿರುಕುಳ ನೀಡಿರುವ ಬಗ್ಗೆ ಬೇಡಡ್ಕ ಠಾಣೆ ಪೊಲೀಸರು ಪೋಕ್ಸೋ ಅನ್ವಯ ಕೇಸು ದಾಖಲಿಸಿಕೊಂಡಿದ್ದರು.





