ಕುಂಬಳೆ: ಶಿರಿಯಾದಲ್ಲಿ ಪ್ರಯಾಣಿಕರನ್ನು ಹತ್ತಿಸುತ್ತಿದ್ದ ಕರ್ನಾಟಕ ರಾಜ್ಯ ರಸ್ತೆಸಾರಿಗೆ ನಿಗಮದ ಬಸ್ಸಿನ ಹಿಂಭಾಗಕ್ಕೆ ಲಾರಿ ಡಿಕ್ಕಿಯಾದ ಪರಿಣಾಮ ಬಸ್ ಹತ್ತುತ್ತಿದ್ದ ಇಬ್ಬರು ಶಿಕ್ಷಕಿಯರು ಹಾಗೂ ಬಸ್ಸಿನ ನಿರ್ವಾಹಕ ಗಾಯಗೊಂಡಿದ್ದಾರೆ.
ಶಿರಿಯ ಜಿಎಚ್‍ಎಸ್ ಶಿಕ್ಷಕಿಯರಾದ ಮಾಯಿಪ್ಪಾಡಿ ನಿವಾಸಿ ಅಕ್ಷಿತಾ, ಕೋಯಿಕ್ಕೋಡ್ ನಿವಾಸಿ ಬೇಬಿ ಹಾಗೂ ಬಸ್ ಚಾಲಕ ಗಾಯಗೊಂಡವರು. ಮಂಗಳೂರಿನಿಂದ ಕಾಸರಗೋಡು ಭಾಗಕ್ಕೆ ಸಂಚರಿಸುವ ಮಧ್ಯೆ ಅಪಘಾತ ಸಂಭವಿಸಿದೆ. ಗಂಭೀರ ಗಾಯಗೊಂಡ ಅಕ್ಷಿತಾ ಅವರನ್ನು ಕುಂಬಳೆಯ ಸಹಕಾರಿ ಆಸ್ಪತ್ರೆಗೆ ದಾಖಲಿಸಲಾಘಿದ್ದು, ಉಳಿದವರು ಪ್ರಥಮ ಚಿಕಿತ್ಸೆಯೊಂದಿಗೆ ತೆರಳಿದ್ದಾರೆ.



