ಪೆರ್ಲ: ಜಿಲ್ಲಾದ್ಯಂತ ಶನಿವಾರ ಬಿರುಸಿನ ಮಳೆಯಾಗಿದೆ. ಕಾಸರಗೋಡು, ಕಣ್ಣುರು ಸೇರಿದಂತೆ ಒಂಬತ್ತು ಜಿಲ್ಲೆಗಳಲ್ಲಿ ಯೆಲ್ಲೋ ಅಲರ್ಟ್ ಘೋಷಿಸಲಾಗಿತ್ತು. ಇನ್ನೂ ಮೂರು ದಿವಸಗಳ ಕಾಲ ಬಿರುಸಿನ ಮಳೆಯಾಗಲಿರುವ ಬಗ್ಗೆ ಹವಾಮಾಣ ಇಲಾಖೆ ಮುನ್ಸೂಚನೆ ನೀಡಿದ್ದು, ಸಮುದ್ರದಲ್ಲಿ ಮೀನುಗಾರರು ಜಾಗ್ರತೆ ಪಾಲಿಸುವಂತೆಯೂ ಎಚ್ಚರಿಕೆ ನೀಡಲಾಗಿದೆ.
ಶನಿವಾರ ಪೆರ್ಲ-ಸೂರಂಬೈಲ್ ರಸ್ತೆಯ ಸ್ವರ್ಗ ಸನಿಹ ಬಿರುಸಿನ ಗಾಳಿ ಹಾಗೂ ಮಳೆಗೆ ವಿದ್ಯುತ್ ಕಂಬ ಹಾಗೂ ಬೃಹತ್ ಮರ ರಸ್ತೆಗೆ ಉರುಳಿದ ಪರಿಣಾಮ ಪೆರ್ಲ-ಸ್ವರ್ಗ-ಸೂರಂಬೈಲ್ ರಸ್ತೆಯಲ್ಲಿ ತಾಸುಗಳ ಕಾಳ ವಾಹನ ಸಂಚಾರಕ್ಕೆ ತಡೆಯುಂಟಾಗಿತ್ತು. ನಂತರ ವಿದ್ಯುತ್ ಕಂಬ ಹಾಗೂ ಮರವನ್ನು ತೆರವುಗೊಳಿಸಿ ವಾಹನಸಂಚಾರ ಸುಗಮಗೊಳಿಸಲಾಯಿತು.



