ಪೆರ್ಲ: ಪಳ್ಳತ್ತಡ್ಕದ ಸಾಂದೀಪನಿ ಯೋಗ ಸೇವಾಲಯ ವತಿಯಿಂದ ಒಂದು ವಾರದ ಯೋಗ ಶಿಬಿರ ಪೆರ್ಲ ಶ್ರೀ ಶಂಕರಸದನದಲ್ಲಿ ಜೂ. 30ರಂದು ಆರಂಭಗೊಳ್ಳಲಿದೆ. ಸಮಚಿತ್ತ ವೃತ್ತಿ ಆರೋಗ್ಯ ವೃದ್ಧಿಗಾಗಿ ಯೋಗ ಶಿಬಿರ ಆಯೋಜಿಸಲಾಗಿದೆ. ಜುಲೈ 6ರ ವರೆಗೆ ಯೋಗ ತರಬೇತಿ ನಡೆಯಲಿರುವುದಾಗಿ ಯೋಗ ಗುರು ಪುಂಡರೀಕಾಕ್ಷ ಆಚಾರ್ಯ ಹೇಳಿಕೆಯಲ್ಲಿ ತಿಳಿಸಿದ್ದಾರೆ.


