HEALTH TIPS

ಶ್ರೀಕ್ಷೇತ್ರ ಧರ್ಮಸ್ಥಳದ ಕ್ರಿಟಿಕಲ್ ಇಲ್‍ನೆಸ್ ಫಂಡ್ ವಿತರಣೆ

ಬದಿಯಡ್ಕ: ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿಸಿ ಟ್ರಸ್ಟ್ ವತಿಯಿಂದ ಬದಿಯಡ್ಕ ವಲಯದ ಮಾಡತ್ತಡ್ಕ ಕಾರ್ಯಕ್ಷೇತ್ರದ ಕುಂಟಾಲುಮೂಲೆ ಚೋಮನಾಯ್ಕ ಎಂಬವರಿಗೆ ಚಿಕಿತ್ಸಾ ಧನಸಹಾಯ `ಕ್ರಿಟಿಕಲ್ ಇಲ್‍ನೆಸ್ ಫಂಡ್' ವಿತರಿಸಲಾಯಿತು. ವರ್ಷಗಳ ಹಿಂದೆ ಅವರು ಪಾಶ್ರ್ವವಾಯು ರೋಗಕ್ಕೆ ತುತ್ತಾಗಿದ್ದರು. ಶ್ರೀಕ್ಷೇತ್ರದ ವತಿಯಿಂದ ರೂ. ಇಪ್ಪತ್ತೈದು ಸಾವಿರ ಧನಸಹಾಯವಾಗಿ ಕಾಸರಗೋಡು ತಾಲೂಕು ಯೋಜನಾಧಿಕಾರಿ ದಿನೇಶ್ ಅವರು ಮಂಜೂರಾತಿ ಪತ್ರವನ್ನು ಹಸ್ತಾಂತರಿಸಿದರು. ಈ ಸಂದರ್ಭದಲ್ಲಿ ಬದಿಯಡ್ಕ ವಲಯ ಮೇಲ್ವಿಚಾರಕಿ ಸುಗುಣ ಎನ್.ಹವಲ್ದಾರ್, ಸೇವಾಪ್ರತಿನಿಧಿ ಜಲಜಾಕ್ಷಿ ಕೆ.ಜೊತೆಗಿದ್ದರು.




ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries