ಮಂಜೇಶ್ವರ: ಕರ್ನಾಟಕ ಯಕ್ಷಗಾನ ಅಕಾಡೆಮಿ ಬೆಂಗಳೂರು ಪ್ರಾಯೋಜಕತ್ವದಲ್ಲಿ ಶ್ರೀ ಅಯ್ಯಕೃಪಾ ಯಕ್ಷಗಾನ ಅಧ್ಯಯನಕೇಂದ್ರ ಬಾಳಿಯೂರು ಸಂಸ್ಥೆಯ ಆಶ್ರಯದಲ್ಲಿ ಎರಡು ತಿಂಗಳ ಉಚಿತ ಯಕ್ಷಗಾನ ತರಬೇತಿ ಉದ್ಘಾಟನೆ ಇಂದು(ಜೂನ್ 29) ಸಂಜೆ 4ಕ್ಕೆ ಬಾಳಿಯೂರಲ್ಲಿ ನಡೆಯಲಿದೆ. ಕರ್ನಾಟಕ ಯಕ್ಷಗಾನ ಅಕಾಡೆಮಿ ಸದಸ್ಯ ಸತೀಶ ಅಡಪ ಸಂಕಬೈಲು ಉದ್ಘಾಟಿಸುವರು.
ಶ್ರೀ ಅಯ್ಯಪ್ಪ ಭಜನಾ ಮಂದಿರ ಬಾಳಿಯೂರು ಇದರ ಅಧ್ಯಕ್ಷ ಮುತ್ತುಶೆಟ್ಟಿ ಬಾಳಿಯೂರು ಅಧ್ಯಕ್ಷತೆ ವಹಿಸಲಿರುವ ಸಮಾರಂಭದಲ್ಲಿ, ಯಕ್ಷಗಾನ ಗುರುಗಳಾದ ಶೇಖರ ಶೆಟ್ಟಿ ಬಾಯಾರು, ಶ್ರೀ ಅಯ್ಯಪ್ಪ ಮಂದಿರ ಬಾಳಿಯೂರು ಇಲ್ಲಿನ ಗುರುಸ್ವಾಮಿ ರಾಧಾಕೃಷ್ಣ ರೈ ಗೌರವ ಉಪಸ್ಥಿತಲಿರುವರು. ತಾರಾಮಣಿ ವಿ ರೈ, ಅಶೋಕ್ ಕುಮಾರ್ ಡಿ., ಅಶ್ವಿನಿ ಕಲ್ಲಗದ್ದೆ, ಯೋಗೀಶ ರಾವ್ ಚಿಗುರುಪಾದೆ ಉಪಸ್ಥಿತರಿರುವರು. ರಾಮಕೃಷ್ಣ ಸಂತಡ್ಕ, ಬ್ರಿಜೇಶ್ ಬಾಳಿಯೂರು ನೇತೃತ್ವ ವಹಿಸುವರು ಎಂದು ಯಕ್ಷಗಾನ ಅಧ್ಯಯನ ಕೇಂದ್ರ ಪ್ರಕಟಣೆ ತಿಳಿಸಿದೆ.


