ಕಾಸರಗೋಡು: ಕೋಟೆಕಣಿ ಶ್ರೀ ರಾಮನಾಥ ಸಾಂಸ್ಕøತಿಕ ಭವನ ಸಮಿತಿ ವತಿಯಿಂದಕನ್ನಡ ಪತ್ರಿಕಾ ದಿನಾಚರಣೆ ಜುಲೈ 1ರಂದು ಸಂಜೆ 5ಕ್ಕೆ ಕೋಟೆಕಣಿ ಶ್ರೀ ರಾಮನಾಥ ಸಾಂಸ್ಕøತಿಕ ಭವನದಲ್ಲಿ ಜರುಗಲಿದೆ.
ಕನ್ನಡ ಸಾಹಿತ್ಯ ಪರಿಷತ್ ಕೇರಳ ಗಡಿನಾಡ ಘಟಕ ಸಂಘಟನಾ ಕಾರ್ಯದರ್ಶಿ ವಿಶಾಲಾಕ್ಷ ಪುತ್ರಕಳ ಸಮಾರಂಭದ ಅಧ್ಯಕ್ಷತೆ ವಹಿಸುವರು. ಈ ಸಂದರ್ಭ ಹಿರಿಯ ಪತ್ರಕರ್ತ, ಅಶೋಕ ಕೆ. ಅವರಿಗೆ ಪತ್ರಿಕಾ ಗೌರವಾರ್ಪಣೆ ಸಲ್ಲಿಸಲಾಗುವುದು. ಪತ್ರಕರ್ತರಾದ ಜಯ ಮಣಿಯಂಪಾರೆ, ವಿಜಿ ಕಾಸರಗೋಡು, ಜಯಶ್ರೀ ಆರ್ಯಾಪು ಮುಖ್ಯ ಅತಿಥಿಗಳಾಗಿ ಭಾಗವಹಿಸುವರು.

