ಪೆರ್ಲ: ಬಣ್ಪುತ್ತಡ್ಕ ಶ್ರೀ ದುರ್ಗಾಪರಮೇಶ್ವರಿ ಶಾಲಾ ರಕ್ಷಕ ಶಿಕ್ಷಕ ಸಂಘದ ಮಾಹಾಸಭೆ ಶಾಲೆಯಲ್ಲಿ ಜರುಗಿತು. ಆಲಾ ಪ್ರಬಂಧಕ ವೇಣುಗೋಪಾಲ್ ಸರ್ಪಂಗಳ ಅಧ್ಯಕ್ಷತೆ ವಹಿಸಿದ್ದರು. ಶಾಲಾ ರಕ್ಷಕ ಶಿಕ್ಷಕ ಸಂಘದ ನೂತನ ಪದಾಧಿಕಾರಗಳ ಆಯ್ಕೆ ನಡೆಯಿತು. ನೂತನ ಅಧ್ಯಕ್ಷರಾಗಿ ಐತಪ್ಪ ಪೂಜಾರಿ ಬಲ್ತಕಲ್ಲು ಅವರನ್ನು ಆಯ್ಕೆ ಮಾಡಲಾಯಿತು. ಉಪಾಧ್ಯಕ್ಷರಾಗಿ ಸೆಮೀರು, ಮಾತೃ ಪಿಟಿಎ ಅಧ್ಯಕ್ಷೆಯಾಗಿ ಶೆಮೀಮ ಹಾಗು ಉಪಾಧ್ಯಕ್ಷೆಯಾಗಿ ಬುಶ್ರ ಅವರನ್ನು ಆಯ್ಕೆ ಮಾಡಲಾಯಿತು. 2025-26ನೇ ಶಾಲಾ ಚಟುವಟಿಕೆಗಳ ಬಗ್ಗೆ ಬಗ್ಗೆ ಚರ್ಚಿಸಲಾಯಿತು. ಶಾಲಾ ಅಭಿವೃದ್ಧೀಯ ಬಗ್ಗೆ ವೇಣುಗೋಪಾಲ್ ಸರ್ಪಂಗಳ ಮಾಹಿತಿ ನೀಡಿದರು. ಶಾಲಾ ಮುಖ್ಯ ಶಿಕ್ಷಕ ಸಾಜು ಟಿ.ವಿ ಸ್ವಾಗತಿಸಿದರು. ಶಿಕ್ಷಕ ಪ್ರವೀಣ್ ಅಡಿಗ ಬಜಕೂಡ್ಲು ವಂದಿಸಿದರು.


