HEALTH TIPS

ಅಲಂಕಾರಿಕ ಪುಷ್ಪ ಆರ್ಕಿಡ್ ಬೆಳೆದು ಆದಾಯಮಾರ್ಗ ಕಂಡುಕೊಳ್ಳುತ್ತಿರುವ ಈಸ್ಟ್ ಎಳೇರಿ, ಕೋಡೋಂಬೇಳೂರು ಪಂಚಾಯಿತಿ ಕೃಷಿಕರು

ಕಾಸರಗೋಡು: ಈಸ್ಟ್ ಎಳೇರಿ ಮತ್ತು ಕೋಡೋಬೇಲೂರು ಪಂಚಾಯಿತಿ ವ್ಯಾಪ್ತಿಯ ಕೃಷಿಕರು ಕೃಷಿ ಇಲಾಖೆಯ ಸಹಾಯದಿಂದ ಆರ್ಕಿಡ್ ಅಲಂಕಾರಿಕ ಹೂವುಗಳನ್ನು ಬೆಳೆಸುವ ಮೂಲಕ ಆದಾಯದ ಮಾರ್ಗವೊಂದನ್ನು ಕಂಡುಕೊಂಡಿದ್ದಾರೆ. 

'ಫೆÇ್ಲೀರಿ ವಿಲೇಜ್' ಎಂಬ ಯೋಜನೆಯ ಅಂಗವಾಗಿ ಆಲಂಕಾರಿಕ ಹೂವು ಆರ್ಕಿಡ್‍ಗಳನ್ನು ಬೆಳೆಸುತ್ತಿದ್ದಾರೆ. ಆರ್ಕಿಡ್ ಕೃಷಿಯನ್ನು ಎರಡೂ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೃಷಿಕರ ಗುಂಪು ತಮ್ಮ ಆದಾಯದ ಮೂಲವನ್ನಾಗಿಸಿಕೊಂಡಿದೆ. 

ಯೋಜನೆಯ ಅಂಗವಾಗಿ, ಕೃಷಿ ಅಭಿವೃದ್ಧಿ ಸಮಿತಿಯ ಸಹಕಾರದೊಂದಿಗೆ ಕೋಡೋಂಬೆಲೂರು ಮತ್ತು ಈಸ್ಟ್‍ಎಳೇರಿ ಗ್ರಾಮ ಪಂಚಾಯಿತಿಗಳಿಂದ ಆಸಕ್ತ ರೈತರನ್ನು ಗುರುತಿಸಿ ವಿವಿಧ ಗುಂಪುಗಳನ್ನು ರಚಿಸಿ, ಇವರಿಗೆ ತರಬೇತಿ ನೀಡುವ ಮೂಲಕ ಆರ್ಕಿಡ್ ಹೂವಿನ ಕೃಷಿ ನಡೆಸಲಾಗುತ್ತಿದೆ. 

ಕೃಷಿ ಇಲಾಖೆಯ'ಆತ್ಮಾ' ನೇತೃತ್ವದಲ್ಲಿ ಮೊದಲ ಹಂತದಲ್ಲಿ ತರಬೇತಿ ನೀಡಲಾಗಿದೆ.  ತರಬೇತಿಯಲ್ಲಿ ಮುಖ್ಯವಾಗಿ ಸಂತಾನೋತ್ಪತ್ತಿ ಮತ್ತು ಕೃಷಿ ನಡೆಸುವ ವಿಧಾನಗಳ ಬಗ್ಗೆ ತರಬೇಥಿ ನೀಡಲಾಘಿತ್ತು. ಪ್ರಸಕ್ತ  52 ಮಂದಿ ಫಲಾನುಭವಿಗಳು ಯೋಜನೆಯನ್ವಯ ಆರ್ಕಿಡ್ ಕೃಷಿ ನಡೆಸುತ್ತಿದ್ದಾರೆ.  ಅವರಲ್ಲಿ 25 ಜನರು ಪ. ವರ್ಗಕ್ಕೆ ಸೇರರಿದವರಾಗಿದ್ದಾರೆ. 

ಇಲಾಖೆಯ ಮೂಲಕ ಪ್ರತಿಯೊಬ್ಬ ಫಲಾನುಭವಿಗೆ ತಲಾ 100 ಸಸಿಗಳನ್ನು ವಿತರಿಸಲಾಗಿದ್ದು, ಇದರ ಜೊತೆಗೆ, ರೈತರಿಗೆ ಗೊಬ್ಬರ ಮತ್ತು ಶೇಡ್‍ನೆಟ್ ಸೌಲಭ್ಯ ಒದಗಿಸಲಾಗಿದೆ. 

ಪ್ರಸಕ್ತ ಕೋಡೋಂಬೆಲೂರು ಮತ್ತು ಈಸ್ಟ್‍ಎಳೇರಿ ಗ್ರಾಮ  ಪಂಚಾಯತ್‍ಗಳಲ್ಲಿ ಎರಡು ಗುಂಪುಗಳಲ್ಲಿ ಆರ್ಕಿಡ್ ಕೃಷಿ ನಡೆಸಲಾಗುತ್ತಿದೆ. ಕಡಿಮೆ ವೆಚ್ಚದಲ್ಲಿ ಬೆಳೆದು ಗರಿಷ್ಠ ಲಾಭ ಗಳಿಸಬಹುದಾದ ಈ ಬೆಳೆಗೆ ಮಾರುಕಟ್ಟೆಯಲ್ಲಿ ಹೆಚ್ಚಿನ ಬೇಡಿಕೆಯಿದೆ. ವಿವಿದ ಸಮಾರಂಭ, ಮದುವೆ ಸೇರಿದಂತೆ ವಿವಿಧ ಕಾರ್ಯಕ್ರಮಗಳಲ್ಲಿ ಆಲಂಕಾರಿಕ ಆರ್ಕಿಡ್‍ಗಳಿಗೆ ಹೆಚ್ಚಿನ ಬೇಡಿಕೆಯಿರುವುದರಿಂದ ಈ ಕೃಷಿಯತ್ತ ಹೆಚ್ಚಿನ ಜನರನ್ನು ಆಕರ್ಷಿಸುವಂತೆ ಮಾಡಿದೆ. ಇಲ್ಲಿ ಕೃಷಿಕರಿಗೆ ಆರ್ಕಿಡ್ ಬೆಳೆಯ ಬಗ್ಗೆ ತರಬೇತಿ ನೀಡುವುದರ ಜತೆಗೆ ಸಸಿ ವಿತರಣೆ ಮಾತ್ರವಲ್ಲದೆ, ಸಬ್ಸಿಡಿ ರೂಪದಲ್ಲಿ ಗೊಬ್ಬರವನ್ನೂ ಕೃಷಿ ಇಲಾಖೆ ಪೂರೈಸುತ್ತಿದೆ. ಮಳೆ ಹಾಗೂ ಬಿಸಿಲು ಸಮಾನವಾಗಿ ಲಭ್ಯವಾಗುವಂತೆ ಮಾಡಲು ಇದಕ್ಕೆ ಪಾರದರ್ಶಕ ನೆಟ್ ಅಳವಡಿಸಬೇಕಾಗುತ್ತದೆ. ಪ್ರಸಕ್ತ ರೈತರು ಪ್ರತಿ ಆರ್ಕಿಡ್ ಸಸ್ಯಕ್ಕೆ ಪ್ರೋತ್ಸಾಹಧನವಾಗಿ ಸರಾಸರಿ 200 ರೂ.ಗಳನ್ನು ಪಡೆಯುತ್ತಾರೆ. ಮುಂಬರುವ ವರ್ಷಗಳಲ್ಲಿ ಆಲಂಕಾರಿಕ ಪುಷ್ಪ ಆರ್ಕಿಡ್‍ನ ವಿವಿಧ ಪ್ರಭೇದಗಳನ್ನು ಬೆಳೆಸುವ ಮೂಲಕ ಕೃಷಿಯನ್ನು ವಿಸ್ತರಿಸುವ ಯೋಜನೆಯನ್ನೂ ಈ ಕೃಷಿಕರು ಹಮ್ಮಿಕೊಂಡಿದ್ದಾರೆ. 

 ಅಭಿಮತ:

-ಆಲಂಕಾರಿಕ ಪುಷ್ಪಗಳಲ್ಲಿ ಖ್ಯಾತಿ ಪಡೆದಿರುವ ಆರ್ಕಿಡ್ ಕೃಷಿಯ ಬಗ್ಗೆ ಮಾಹಿತಿಯಿಲ್ಲದೆ, ಇದರಿಂದ ವಿಮುಖರಾಗುತ್ತರುವ ಮಧ್ಯೆ, ಕೃಷಿ ಇಲಾಖೆ ಮತ್ತು ಅದರ ಅಧಿಕಾರಿಗಳು ಈ ಕೃಷಿಯಲ್ಲಿ ನಮ್ಮನ್ನು ತೊಡಗಿಸಿಕೊಳ್ಳುವಂತೆ ಮಾಡಿದ್ದಾರೆ.  ಇಳುವರಿ ಬರಲಾರಂಭಿಸಿದ್ದು, ಮಾರುಕಟ್ಟೆಗಾಗಿ ತಯಾರಿ ನಡೆಸುತ್ತಿದ್ದೇವೆ.

ಸೆಬಾಸ್ಟಿಯನ್

ಈಸ್ಟ್ ಎಳೇರಿ ಪಂಚಾಯಿತಿಯ ಆರ್ಕಿಡ್ ಬೆಳೆಗಾರ



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries