HEALTH TIPS

Israel-Palestine Conflict: ಇಸ್ರೇಲ್‌ ದಾಳಿಯಲ್ಲಿ 49 ಜನರು ಸಾವು

ದಾರ್‌ ಅಲ್-ಬಲಾ: ಗಾಜಾದ ಮೇಲೆ ಇಸ್ರೇಲ್‌ ನಡೆಸಿದ ದಾಳಿಯಲ್ಲಿ 49 ಜನರು ಸಾವಿಗೀಡಾಗಿದ್ದಾರೆ. ಶುಕ್ರವಾರ ರಾತ್ರಿಯಿಂದ ಶನಿವಾರ ಮುಂಜಾನೆವರೆಗೆ ಇಸ್ರೇಲ್‌ ದಾಳಿ ನಡೆಸಿದೆ ಎಂದು ಸ್ಥಳೀಯ ಅಧಿಕಾರಿಗಳು ತಿಳಿಸಿದ್ದಾರೆ. 

ಗಾಜಾ ನಗರದಲ್ಲಿ ನಿರಾಶ್ರಿತರು ತಂಗಿರುವ ಕ್ರೀಡಾಂಗಣ, ವಸತಿ ಕಟ್ಟಡಗಳು ಹಾಗೂ ಡೇರೆಗಳ ಮೇಲೆ ದಾಳಿ ನಡೆಸಲಾಗಿದೆ. ಕ್ರೀಡಾಂಗಣದ ಮೇಲೆ ನಡೆದ ದಾಳಿಯಲ್ಲಿ 12 ಮಂದಿ ಬಲಿಯಾಗಿದ್ದಾರೆ.

ಇಸ್ರೇಲ್‌-ಹಮಾಸ್‌ ನಡುವೆ ಕದನ ವಿರಾಮ ಒಪ್ಪಂದಕ್ಕೆ ಪ್ರಯತ್ನ ನಡೆಯುತ್ತಿರುವ ಸಂದರ್ಭದಲ್ಲೇ ಈ ದಾಳಿ ನಡೆದಿದೆ. ವಾಷಿಂಗ್ಟನ್‌ನ ಓವಲ್‌ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ 'ಮುಂದಿನ ವಾರದೊಳಗೆ ಕದನ ವಿರಾಮ ಒಪ್ಪಂದವಾಗಲಿದೆ' ಎಂದಿದ್ದಾರೆ.

'ಇಸ್ರೇಲ್‌ ಸಚಿವ ರಾನ್‌ ಡೆರ್ಮರ್‌ ಅವರು ಅಮೆರಿಕಕ್ಕೆ ತೆರಳಲಿದ್ದು, ಹಮಾಸ್‌ನೊಂದಿಗೆ ಕದನ ವಿರಾಮ ಹಾಗೂ ಇರಾನ್‌ ಜತೆಗಿನ ಯುದ್ಧ ಸೇರಿದಂತೆ ಇತರ ವಿಷಯಗಳ ಕುರಿತು ಚರ್ಚೆ ನಡೆಸಲಿದ್ದಾರೆ' ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

2023ರ ಅಕ್ಟೋಬರ್‌ 7ರಿಂದ ನಡೆಯುತ್ತಿರುವ ಹಮಾಸ್‌ ಮತ್ತು ಇಸ್ರೇಲ್‌ ನಡುವಿನ ಯುದ್ಧದಲ್ಲಿ ಈವರೆಗೆ 56 ಸಾವಿರಕ್ಕೂ ಅಧಿಕ ಪ್ಯಾಲೆಸ್ಟೀನಿಯರು ಸಾವಿಗೀಡಾಗಿದ್ದಾರೆ ಎಂದು ಸ್ಥಳೀಯ ಆರೋಗ್ಯ ಅಧಿಕಾರಿಗಳು ಹೇಳಿದ್ದಾರೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries