ಮುಳ್ಳೇರಿಯ ಯುವಕನನ್ನು ತಡೆದು ನಿಲ್ಲಿಸಿ ಹಲ್ಲೆ ನಡೆಸಿರುವುದಲ್ಲದೆ, ಆತನ ಮನೆಗೆ ಕಲ್ಲೆಸೆದು ಹಾನಿಯೆಸಗಿದ್ದ ಆರೋಪಿಯನ್ನು 30 ವರ್ಷಗಳ ನಂತರ ಆದೂರು ಠಾಣೆ ಪೊಲೀಸರು ಬಂಧಿಸಿದ್ದಾರೆ. ಅಡೂರು ಮೂಲ ಹೌಸ್ ನಿವಾಸಿ ಎಂ.ಇ ಬಾತಿಷಾ(48)ಬಂಧಿತ.
1995 ಏ. 21ರಂದು ತನ್ನ 18ರ ಹರೆಯದಲ್ಲಿ ಬಾತಿಷಾ ಅಬೂಬಕ್ಕರ್ ಎಂಬವರ ಮೇಲೆ ಹಲ್ಲೆ ನಡೆಸಿದ್ದು, ಈ ಸಂದರ್ಭ ತಡೆಯಲು ಬಂದ ಅವರ ತಾಯಿಗೂ ಗಾಯಗಳುಂಟಾಗಿತ್ತು. ಅಲ್ಲದೆ ಅಬೂಬಕ್ಕರ್ ಮನೆಗೂ ಬಾತಿಷಾ ಕಲ್ಲೆಸೆದಿರುವ ಬಗ್ಗೆ ಪೊಲೀಸರು ಕೇಸು ದಾಖಲಿಸಿಕೊಂಡಿದ್ದರು. ನಂತರ ಈತ ವಿದೇಶಕ್ಕೆ ಪರಾರಿಯಾಗಿದ್ದನು. ಹಲವು ವರ್ಷಗಳ ನಂತರ ಊರಿಗೆ ಬಂದಿದ್ದರೂ, ತಲೆಮರೆಸಿಕೊಂಡಿದ್ದ ಈತನನ್ನು ಬಂಧಿಸಲು ಸಧ್ಯವಾಗಿರಲಿಲ್ಲ. ನಂತರ ಈತನನ್ನು ತಲೆಮರೆಸಿಕೊಂಡಿರುವ ಆರೋಪಿ ಎಂದು ಘೋಷಿಸಲಾಗಿತ್ತು. ಈ ಮಧ್ಯೆ ಆರೋಪಿ ಪೈವಳಿಕೆ ಚೇವಾರಿನ ಮಡುವಳಗದ್ದೆಯಲ್ಲಿರುವ ಬಗ್ಗೆ ಲಭಿಸಿದ ಮಾಃಇತಿಯನ್ವಯ ಪೊಲೀಸರು ಕಾರ್ಯಾಚರಣೆ ನಡೆಸಿದ್ದರು.




