ಮುಳ್ಳೇರಿಯ : ಮುಳ್ಳೇರಿಯ ಸನಿಹದ ಪೂವಡ್ಕ ಪ್ರದೇಶದಲ್ಲಿ ಕಾಡುಕೋಣಗಳ ಗುಂಪು ಕಾಣಿಸಿಕೊಂಡಿದ್ದು, ಈ ಪ್ರದೇಶದ ಜನತೆಯ ನಿದ್ದೆಗೆಡಿಸಿದೆ. ಕಾಡಿನಿಂದ ನಾಡಿಗಿಳಿದು ರಸ್ತೆಯಲ್ಲೇ ಅಡ್ಡಾಡುತ್ತಿರುವ ಕಾಡುಕೋಣಗಳು ಜನಸಂಚಾರವನ್ನೂ ಲೆಕ್ಕಿಸದೆ ಓಡಾಟ ನಡೆಸುತ್ತಿರುವುದು ಜನರಲ್ಲಿ ಆತಂಕಕ್ಕೆ ಕಾರಣವಾಗಿದೆ. ಕಳೆದ ಕೆಲವು ದಿವಸಗಳಿಂದ ಚೆರ್ಕಳ-ಜಾಲ್ಸೂರು ಅಂತಾರಾಜ್ಯ ಹೆದ್ದಾರಿಯ ಪೂವಡ್ಕ ಆಸುಪಾಸು ಕಾಡುಕೋಣಗಳು ಗುಂಪಾಗಿ ಸಂಚರಿಸುತ್ತಾ ಜನರಲ್ಲಿ ಭೀತಿ ಸೃಷ್ಟಿಸುತ್ತಿರುವುದಾಗಿ ಸ್ಥಳೀಯರು ತಿಳಿಸಿದ್ದಾರೆ.




