ಕಾಸರಗೋಡು: ಆನೆಗುಂದಿ ಗುರುಪೀಠದ ಪುನ:ನಿರ್ಮಾಣಕ್ಕಾಗಿ ಸಮಾಜಬಾಂಧವರ ಸಕ್ರಿಯಸಹಭಾಗಿತ್ವದ ಜತೆಗೆ ಮಧೂರಿನ ಬಾಂಧವರು ಮುಂಚೂಣಿಯಲ್ಲಿದ್ದು ನಡೆಸಿರುವ ಕೆಲಸಕಾರ್ಯಗಳು ಶ್ಲಾಘನೀಯ ಎಂದು ಶ್ರೀಮತ್ ಜಗದ್ಗುರು ಆನೆಗುಂದಿ ಮಹಾಸಂಸ್ಥಾನದ ಕಾಳಹಸ್ತೇಂದ್ರ ಸರಸ್ವತೀ ಮಹಾಸ್ವಾಮಿ ತಿಳಿಸಿದ್ದಾರೆ.
ಅವರು ತಮ್ಮ 21ನೇ ಚಾತುರ್ಮಾಸ್ಯ ವ್ರತಾಚರಣೆಯ ಪೂರ್ವಭಾವಿ ಕ್ಷೇತ್ರ ಸಂದರ್ಶನದ ಅಂಗವಾಗಿ ಮಧೂರು ಶ್ರೀ ಕಾಳಿಕಾಂಬಾ ಮಠದಲ್ಲಿ ಶಿಷ್ಯರಿಗೆ ಮಂತ್ರಾಕ್ಷತೆಯೊಂದಿಗೆ ಆಶೀರ್ವಚನ ನೀಡಿದರು.
ಇಂದು ಗುರುಪೀಠ ಅನೇಕ ಯೋಜನೆಗಳೊಂದಿಗೆ ಗುರುಪೀಠದ ವ್ಯಾಪ್ತಿ ವಿಸ್ತಾರಗೊಳ್ಳುತ್ತಿದೆ. ಚಾತುರ್ಮಾಸ್ಯ ಸಂದರ್ಭ ವಿವಿಧ ಯುವಗೋಷ್ಠಿ, ಪೂರ್ವಛಾತ್ರ ಸಂಘದ ವತಿಯಿಂದ ರಾಶಿದೋಷಗಳ ಪರಿಹಾರಕ್ಕಾಗಿ ದ್ವಾದಶ ರಾಶಿಪೂಜೆಯನ್ನು ವಿಶೇಷವಾಗಿ ಆಯೋಜಿಸಲಾಗಿದೆ. ಚಾತುರ್ಮಾಸ್ಯ ಸಮಾರಂಭದಲ್ಲಿ ಸಮಾಜಬಾಂಧವರು ಗುರುಪೀಠಕ್ಕೆ ಆಗಮಿಸುವಂತೆ ಮನವಿ ಮಾಡಿದರು.
ಚಾತುರ್ಮಾಸ್ಯ ವ್ರತ ನಿರ್ವಹಣಾ ಸಮಿತಿ ಪ್ರಧಾನ ಕಾರ್ಯದರ್ಶಿ ಲೋಕೇಶ್ ಎಂ. ಬಿ ಆಚಾರ್ ಕಂಬಾರು ಪದಾಧಿಕಾರಿಗಳಾದ, ಜನಾರ್ಧನ ಆಚಾರ್ಯ ಕನ್ಯಾನ, ನಿವೃತ್ತ ಸುಬೇಧಾರ್ ವೈ ಧಮೇರ್ಂದ್ರ ಆಚಾರ್ಯ ಪರಕ್ಕಿಲ, ಗಣೇಶ್ ಆಚಾರ್ಯ ಕೆಮ್ಮಣ್ಣು, ಗುರುರಾಜ ಕೆ.ಜೆ ಆಚಾರ್ಯ ಮಂಗಳೂರು, ಜನಾರ್ಧನ ಆಚಾರ್ಯ ಬಜಕೂಡ್ಲು, ಬಿ.ವಿಘ್ನೇಶ್ ಆಚಾರ್ಯ ಕಾಸರಗೋಡು, ದಯಾನಂದ ಆಚಾರ್ಯ ಕೆಳಾರ್ಕಳಬೆಟ್ಟು, ಆಡಳಿತ ಸಮಿತಿಯ ಪದಾಧಿಕಾರಿಗಳು ಉಪಸ್ತಿತರಿದ್ದರು.
ಮಧೂರು ಶ್ರೀ ಕಾಳಿಕಾಂಬಾ ಮಠಕ್ಕೆಆಗಮಿಸಿದ ಆನೆಗುಂದಿ ಶ್ರೀಗಳವರನ್ನು ಆಡಳಿತ ಸಮಿತಿ ಅಧ್ಯಕ್ಷ ನ್ಯಾಯವಾದಿ ಕೆ. ಪ್ರಭಾಕರ ಆಚಾರ್ಯ ಕೋಟೆಕಾರು ಇವರು ಸ್ವಾಗತಿಸಿದರು, ವಕೀಲ ಕೆ. ಎಂ ಗಂಗಾಧರ ಆಚಾರ್ಯ ಕೊಂಡೆವೂರು ಪ್ರಸ್ತಾವಿಕ ಮಾತುಗಳನ್ನಾಡಿದರು. ಉಪಾಧ್ಯಕ್ಷ ಕೆ. ಎಂ ಜಗದೀಶ ಆಚಾರ್ಯ ಕಾರ್ಯಕ್ರಮ ನಿರೂಪಿಸಿದರು. ಕಾರ್ಯದರ್ಶಿ ಎಂ ತಾರನಾಥ ಆಚಾರ್ಯ ವಂದಿಸಿದರು.




