ಮುಳ್ಳೇರಿಯ ಹರಿಹರ ಆಟ್ರ್ಸ್ ಮತ್ತು ಸ್ಪೋಟ್ರ್ಸ್ ಕ್ಲಬ್ಬಿನ ಮಹಾಸಭೆ ಪಣಿಯ ಕ್ಲಬ್ಬಿನ ಕಚೇರಿಯಲ್ಲಿ ಜರಗಿತು. ಕ್ಲಬ್ಬಿನ ಅಧ್ಯಕ್ಷ ಪ್ರಸಾದ್ ಪೂಜಾರಿ ಪಣಿಯೆ ಅಧ್ಯಕ್ಷತೆ ವಹಿಸಿದ್ದರು. ಕಾರಡ್ಕ ಪಂಚಾಯತಿ ಸದಸ್ಯೆ ಚಿತ್ರಕಲ ಕೋಳಿಕ್ಕಜೆ ದೀಪ ಬೆಳಗಿಸಿ ಸಭೆಯನ್ನು ಉದ್ಘಾಟಿಸಿದರು. ಕ್ಲಬ್ಬಿನ ಗೌರವಾಧ್ಯಕ್ಷ ಗೋಪಾಲಕೃಷ್ಣ ಶುಭ ಹಾರೈಸಿದರು ಕ್ಲಬ್ಬಿನ ನೂತನ ಪದಾಧಿಕಾರಿಗಳನ್ನು ಈ ಸಂದರ್ಭದಲ್ಲಿ ಘೋಷಿಸಲಾಯಿತು.
ನೂತನ ಅಧ್ಯಕ್ಷರಾಗಿ ವಿಜಯಕುಮಾರ್ ಪೂಜಾರಿ ಪಣಿಯ, ಪ್ರಧಾನ ಕಾರ್ಯದರ್ಶಿಯಾಗಿ ಶರತ್ ನೆಚ್ಚಿಪಡುಪು, ಕೋಶಾಧಿಕಾರಿಯಾಗಿ ಲತೀಶ್ ರಾವ್ ಪಣಿಯ, ಉಪಾಧ್ಯಕ್ಷರಾಗಿ ಶಿವದೀಪ್ ಕೆದಿಲಾಯ, ಕಾರ್ಯದರ್ಶಿಯಾಗಿ ಚಂದ್ರಶೇಖರ ಪಣಿಯೆ ಆಯ್ಕೆಯಾದರು. ಇತರ ಪದಾಧಿಕಾರಿಗಳನ್ನು ಘೋಷಿಸಲಾಯಿತು. ಶರತ್ ಪಣಿಯೆ ಲೆಕ್ಕಪತ್ರ ಮಂಡಿಸಿದರು. ಗಿರೀಶ್ ಪಣಿಯೆ ಸ್ವಾಗತಿಸಿ, ಶ್ಯಾಮಕೃಷ್ಣ ಪ್ರಕಾಶ್ ವಂದಿಸಿದರು.

.jpg)
