ಕಾಸರಗೋಡು: ಸ್ಥಳೀಯಾಡಳಿತ ಚುನಾವಣಾ ಮತ ಎಣಿಕೆ ಆರಂಭವಾಗಿದೆ. ಎಲ್‌ಡಿಎಫ್‌ಗೆ ಮೊದಲ ಮುನ್ನಡೆ ರಾಜ್ಯದಾದ್ಯಂತ ಕಾಣಿಸಿದೆ. ಕೊಚ್ಚಿ, ಕೊಲ್ಲಂ, ತಿರುವನಂತಪುರಂ ಮತ್ತು ಕೋಝಿಕ್ಕೋಡ್ ಕಾರ್ಪೊರೇಷನ್‌ಗಳಲ್ಲಿ ಎಲ್‌ಡಿಎಫ್‌ಗೆ ಮೊದಲ ಮುನ್ನಡೆ ವ್ಯಕ್ತವಾಗಿದೆ. ಅಂಚೆ ಮತಗಳನ್ನು ಮೊದಲು ಎಣಿಕೆ ಮಾಡಲಾಗುತ್ತಿದೆ.
ಮತ ಎಣಿಕೆಗೆ ಚುನಾವಣಾ ಆಯೋಗವು ವಿಸ್ತಾರವಾದ ವ್ಯವಸ್ಥೆಗಳನ್ನು ಮಾಡಿದೆ. ಫಲಿತಾಂಶಗಳನ್ನು ಘೋಷಿಸಲು ಆಧುನಿಕ ಸೌಲಭ್ಯಗಳನ್ನು ಸಹ ಒದಗಿಸಲಾಗಿದೆ. ಚುನಾವಣಾ ಫಲಿತಾಂಶಗಳನ್ನು ಎಣಿಕೆ ಕೇಂದ್ರಗಳಿಂದ ಚುನಾವಣಾ ಆಯೋಗದ ವೆಬ್‌ಸೈಟ್‌ಗಳ ಮೂಲಕ ನೇರಪ್ರಸಾರ ಮಾಡಲಾಗುತ್ತಿದೆ.

