ಮುಳ್ಳೇರಿಯ: ಭಾರತೀಯ ಕಿಸಾನ್ ಸಂಘದ ನೇತೃತ್ವದಲ್ಲಿ ಕಾರಡ್ಕ ಬ್ಲಾಕ್ ಕೃಷಿಕರ ಸಭೆ ಮುಳ್ಳೇರಿಯ ಗಣೇಶ್ ಕಲಾ ಮಂದಿರದಲ್ಲಿ ನಡೆಯಿತು. ಬೆಳ್ಳೂರು ಸೇ.ಸ.ಬ್ಯಾಂಕ್ ಅಧ್ಯಕ್ಷ ಸುಬ್ರಹ್ಮಣ್ಯ ಕಡಂಬಳ್ಳಿತ್ತಾಯರು ದೀಪಪ್ರಜ್ವಲನೆಗೈದು ಸಮಾರಂಭ ಉದ್ಘಾಟಿಸಿದರು.
ಕಾರಡ್ಕ ಬ್ಲಾಕ್ ನಲ್ಲಿ ಒಳಪಟ್ಟಿರುವ ಪಂಚಾಯತಿಗಳಾದ, ಕುತ್ತೀಕೋಲು, ಬೇಡಡ್ಕ, ಮುಳಿಯಾರ್, ಕಾರಡ್ಕ, ಕುಂಬ್ಡಾಜೆ, ಬೆಳ್ಳೂರು, ದೇಲಂಪಾಡಿ ಎಂಬೀ ಏಳು ಪಂಚಾಯತಿಗಳಲ್ಲಿನ ಸದಸ್ಯರುಗಳನ್ನು ಆಯ್ಕೆ ಮಾಡಿ ಸಮಿತಿಯನ್ನು ರಚಿಸಲಾಯಿತು.
ಬ್ಲಾಕ್ ಸಮಿತಿಯ ಅಧ್ಯಕ್ಷರಾಗಿ ಜಗಜೀವನ್ ದಾಸ್ ಶೆಟ್ಟಿ. ಉಪಾಧ್ಯಕ್ಷರಾಗಿ ಮೋಹನನ್ ಆದೂರು, ಜನಾರ್ದನನ್ ಕುತ್ತೀಕೋಲು, ಕಾರ್ಯದರ್ಶಿಗಳಾದ ಪ್ರಶಾಂತ್ ಕಾರಡ್ಕ, ರಾಜನ್ ಕುತ್ತಿಕೋಲು, ಕೋಶಾಧಿಕಾರಿಯಾಗಿ ಶ್ರೀಕೃಷ್ಣಭಟ್ ಬಂದಡ್ಕ. ಮತ್ತು ಎಲ್ಲಾ ಪಂಚಾಯತುಗಳಿಂದ ಸದಸ್ಯರುಗಳನ್ನು ಸೇರಿಸಿ ಸಮಿತಿ ರಚಿಸಲಾಯಿತು.
ಕಿಸಾನ್ ಸಂಘದ ಜಿಲ್ಲಾ ಅಧ್ಯಕ್ಷ ಪುರುಷೋತ್ತಮ ಬೊಡ್ಡನಕೊಚ್ಚಿ ಅಧ್ಯಕ್ಷತೆ ವಹಿಸಿದ್ದರು. ಬಾರತೀಯ ಕಿಸಾನ್ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಪಿ.ಮುರಳಿಧರನ್ ಮುಖ್ಯಭಾಷಣ ಮಾಡಿದರು. ರಾಜ್ಯ ಉಪಾಧ್ಯಕ್ಷ ರಾಮ. ಯನ್. ಮಾತಾಡಿದರು. ಸಭೆಯಲ್ಲಿ ಜಿಲ್ಲಾ ಉಪಾಧ್ಯಕ್ಷ ಡಾ.ಶಿವರಾಯ.ಭಟ್, ಜಿಲ್ಲಾ ಕಾರ್ಯದರ್ಶಿ ಸಚಿನ್ ಕುಮಾರ್. ಯಂ. ಕೃಷಿ ಹಾಗೂ ಕೃಷಿಕರ ಯೋಜನೆಗಳ ಬಗ್ಗೆ ನಿರ್ದೇಶನಗಳನ್ನು ನೀಡಿದರು. ವಿಶೇಷವಾಗಿ ಕಂಗು ಕೃಷಿಗೆ ಬಾಧಿಸಿರುವ ಎಲೆಚುಕ್ಕಿ ರೋಗ, ಹಳದಿರೋಗ, ವಿಪರೀತ ಮಳೆ ಕಾರಣ ಮಹಾಳಿ ರೋಗದಿಂದ ಈ ಪ್ರದೇಶದ ಕೃಷಿಕರು ಕಂಗಲಾಗಿದ್ದಾರೆ. ಇದರ ಬಗ್ಗೆ ಸರ್ಕಾರ ಹಾಗೂ ಕೃಷಿ ಇಲಾಖೆಯು ಶೀಘ್ರ ಗಮನಹರಿಸಿ ಕೃಷಿಕರಿಗೆ ನಷ್ಟದಪರಿಹಾರ ನೀಡಬೇಕಾಗಿ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಯಿತು.ಜಿಲ್ಲಾ ಪ್ರಧಾನ ಕಾರ್ಯದರ್ಶಿ ದಿನೇಶ್ ಚೆರುಗೋಳಿ ಸ್ವಾಗತಿಸಿ, ವಂದಿಸಿದರು.

.jpg)
