ಉಪ್ಪಳ: ಕನ್ನಡ ಭಾಷೆ, ಸಾಹಿತ್ಯ, ಕಲೆ, ಸಂಸ್ಕøತಿಗಳಿಗೆ ಅಮೂಲ್ಯ ಕೊಡುಗೆ ನೀಡಿದ ಹಿರಿಯ ಸಾಧಕರನ್ನು ಅವರ ಮನೆಯಂಗಳದಲ್ಲಿ ಗೌರವಿಸುವ ಕನ್ನಡ ಸಾಹಿತ್ಯ ಪರಿಷತ್ತು ಕೇರಳ ಗಡಿನಾಡ ಘಟಕದ `ಪರಿಷತ್ತಿನ ನಡಿಗೆ ಹಿರಿಯ ಸಾಧಕರ ಕಡೆಗೆ' ಎಂಬ ಕಾರ್ಯಕ್ರಮದ ಅಂಗವಾಗಿ ಕಸೂತಿ-ಕರಕುಶಲ ತಜ್ಞೆ, ಸಾಹಿತಿ, ಅಂಕಣಗಾರ್ತಿ ಶಶಿಕಲಾ ಬಾಯಾರು ಅವರನ್ನು ಸಜಂಕಿಲ ದಲ್ಲಿರುವ ಅವರ ನಿವಾಸ `ಸ್ವಸ್ತಿಕ'ದಲ್ಲಿ ಅಭಿನಂದಿಸಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕನ್ನಡ ಸಾಹಿತ್ಯ ಪರಿಷತ್ತು ಕೇರಳ ಗಡಿನಾಡ ಘಟಕದ ಅಧ್ಯಕ್ಷ ಡಾ.ಜಯಪ್ರಕಾಶ ನಾರಾಯಣ ತೊಟ್ಟೆತ್ತೋಡಿ ಅವರು ಶಶಿಕಲಾ ಬಾಯಾರು ಅವರನ್ನು ಶಾಲು ಹೊದೆಸಿ ಅಭಿನಂದಿಸಿದರು.
ಕಾಸರಗೋಡು ಜಿಲ್ಲಾ ಕನ್ನಡ ಲೇಖಕರ ಸಂಘದ ಕಾರ್ಯಾಧ್ಯಕ್ಷ ಪ್ರ್ರೊ.ಪಿ.ಎನ್.ಮೂಡಿತ್ತಾಯ ಅಭಿನಂದನಾ ಭಾಷಣ ಮಾಡಿದರು. ವಿದ್ವಾನ್ ಪೆರ್ಲ ಕೃಷ್ಣ ಭಟ್ಟರ ಪುತ್ರಿಯಾಗಿರುವ ಶಶಿಕಲಾ ಬಾಯಾರು ಅವರು ಕಾಸರಗೋಡಿನ ಹೆಮ್ಮೆಯ ಕಸೂತಿ ಚಿತ್ರಕಲಾವಿದೆ. ಅವರ ವ್ಯಕ್ತಿಚಿತ್ರಗಳು ಅಪೂರ್ವವಾದವುಗಳು. ಅವರ `ಪತ್ರಾರ್ಜಿತ' ಕೃತಿ, ಅಂಕಣ ಪತ್ರಗಳು, ಕತೆಗಳು ವೈಶಿಷ್ಟ್ಯಪೂರ್ಣ ವಾದವುಗಳು. ಎಲೆಮರೆಯ ಕಾಯಂತಿರುವ ಶಶಿಕಲಾರ ಕಸೂತಿ ಚಿತ್ರಗಳು ನಾಡಿನಾದ್ಯಂತ ಪ್ರದರ್ಶನಗೊಳ್ಳ್ಳಬೇಕಾಗಿದೆ ಎಂದು ಪ್ರೊ. ಪಿ.ಎನ್.ಮೂಡಿತ್ತಾಯ ಹೇಳಿದರು.
ಕವಯತ್ರಿ ಸಂಧ್ಯಾ ಗೀತಾ ಬಾಯಾರು, ನಿವೃತ್ತ ಮುಖ್ಯ ಶಿಕ್ಷಕ ರಾಜಾರಾಮ ರಾವ್ ಅವರು ಶಶಿಕಲಾ ಅವರ ವ್ಯಕ್ತಿತ್ವ ಮತ್ತು ಸಾಹಿತ್ಯದ ಕುರಿತು ಮಾತನಾಡಿದರು. ಶಿಕ್ಷಕ ಪ್ರಭಾಕರ, ಶಿಕ್ಷಕಿ ನಿವೇದಿತಾ, ಕೊಳಲು ತಜ್ಞ ಕೃಷ್ಣರಾಜ, ಚಿನ್ಮಯಕೃಷ್ಣ, ಆಶಯ, ಸ್ಮಿತಾ ಉಪಸ್ಥಿತರಿದ್ದರು. ಶಶಿಕಲಾ ಬಾಯಾರು ಅವರು ಸಮ್ಮಾನಕ್ಕೆ ಕೃತಜ್ಞತೆ ಸಲ್ಲಿಸಿ ಮಾತನಾಡಿದರು.
ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದರ್ಶಿ ಶೇಖರ ಶೆಟ್ಟಿ ಬಾಯಾರು ಸ್ವಾಗತಿಸಿ, ಸಂಘಟನಾ ಕಾರ್ಯದರ್ಶಿ ವಿಶಾಲಾಕ್ಷ ಪುತ್ರಕಳ ಕಾರ್ಯಕ್ರಮ ನಿರೂಪಿಸಿದರು. ಶಿಕ್ಷಕ ರವಿಲೋಚನ ಸಿ .ಎಚ್. ವಂದಿಸಿದರು.

.jpg)
