ಬದಿಯಡ್ಕ: ಎಡನೀರು ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿ ಅವರ ಐದನೇ ವರ್ಷದ ಚಾತುರ್ಮಾಸ್ಯ ವ್ರತಾಚರಣೆ ಅಂಗವಾಗಿ ಸಂಪಾಜೆಯ ಡಾ. ಕೀಲಾರು ಗೋಪಾಲಕೃಷ್ಣಯ್ಯ ಪ್ರತಿಷ್ಠಾನ ವತಿಯಿಂದ ಅಮೋಘ ಯಕ್ಷಗಾನ ತಾಳಮದ್ದಳೆ ದಶಾಹ ಜು. 18ರಿಂದ 27ರ ವರೆಗೆ ಶ್ರೀಮಠದಲ್ಲಿ ಜರುಗಲಿದೆ. ಕರ್ನಾಟಕದ ದಕ್ಷಿಣೋತ್ತರ ಹಾಗೂ ಕಾಸರಗೋಡು ಜಿಲ್ಲೆಯ ಪ್ರಸಿದ್ಧ ಕಲಾವಿದರ ಕೂಡುವಿಕೆಯೊಂದಿಗೆ ಯಕ್ಷಗಾನ ತಾಳಮದ್ದಳೆ ದಶಾಹ ನಡೆಯಲಿರುವುದು.
ಪ್ರತಿದಿ ನಸಂಜೆ 6ಕ್ಕೆ ತಾಳಮದ್ದಳೆ ಆರಂಭಗೊಳ್ಳುವುದು. 118ರಂದು ವಾಲಿವಧೆ, 19ರಂದು ಸಉಭದ್ರಾ ಕಲ್ಯಾಣ, 20ರಂದು ಭೀಷ್ಮೋತ್ಪತ್ತಿ, 21ರಂದು ಶರಸೇತು ಬಂಧನ, 22ರಂದು ಪ್ರಹ್ಲಾದ ಚರಿತ್ರೆ, 23ರಂದು ಅತಿಕಾಯ ಕಾಳಗ, 24ರಂದು ದ್ರೌಪದೀ ಪ್ರತಾಪ, 25ರಂದು ಕೌಶಿಕ ಪ್ರತಿಜ್ಞೆ, 26ರಂದು ಭೃಗು ಶಾಪ, 27ರಂದು ಶ್ರೀಕೃಷ್ಣ ಸಂಧಾನ ಪ್ರಸಂಗ ಪ್ರಸ್ತುತಗೊಳ್ಳಲಿದೆ. ಖ್ಯಾತ ಯಕ್ಷಗಾನ ಕಲಾವಿದ ವಾಸುದೇವ ರಂಗಭಟ್ಟ ಕಾರ್ಯಕ್ರಮ ಸಂಯೋಜಿಸುವರು.


