ಕಾಸರಗೋಡು: ಜಿಲ್ಲಾಡಳಿತ ವತಿಯಿಂದ ವಿದ್ಯಾನಗರದ ನಗರಸಭಾ ಸ್ಟೇಡಿಯಂನಲ್ಲಿ ನಡೆಯಲಿರುವ ಜಿಲ್ಲಾಮಟ್ಟದ ಸ್ವಾತಂತ್ರ್ಯೋತ್ಸವ ಸಮಾರಂಭದಲ್ಲಿ ರಾಜ್ಯ ಇಂಧನ ಖಾತೆ ಸಚಿವ ಕೆ. ಕೃಷ್ಣನ್‍ಕುಟ್ಟಿ ಉಖ್ಯ ಅತಿಥಿಯಾಗಿ ಭಾಗವಹಿಸಿ ಧ್ವಜಾರೋಹಣ ನಡೆಸುವರು. ಬೆಳಗ್ಗೆ 9ಕ್ಕೆ ಧ್ವಜಾರೋಹಣ ನಡೆಯುವುದು. ಸ್ವಾತಂತ್ರ್ಯಹೋರಾಟಗಾರರು, ಸಂಸದರು, ಶಾಸಕರು, ಸಾರ್ವಜನಿಕ ಪ್ರತಿನಿಧಿಗಳು ಪಾಳ್ಗೊಳ್ಳುವರು ಪರೇಡ್ ತರಬೇತಿ ಆ. 10ರಿಂದ 13ರ ವರೆಗೆ ಕಾಸರಗೋಡು ನಗರಸಭಾ ಕ್ರೀಡಾಂಗಣದಲ್ಲಿ ನಡೆಯಲಿದೆ.
ಪರೇಡ್ ನಲ್ಲಿ 19 ತುಕಡಿಗಳಪಥ ಸಂಚಲನ ನಡೆಯಲಿದ್ದು, ಎ.ಆರ್ ಕ್ಯಾಂಪ್ ಸಹಾಯಕ ಕಮಾಂಡೆಂಟ್ ಪರೇಡ್ ನಿಯಂತ್ರಿಸಲಿದ್ದಾರೆ. ಜಿಲ್ಲಾ ಸಶಸ್ತ್ರ ಮೀಸಲು ಪೆÇಲೀಸ್, ಸ್ಥಳೀಯ ಪೆÇಲೀಸ್, ಮಹಿಳಾ ಪೆÇಲೀಸ್, ಅಬಕಾರಿ, ನಾಯಮರ್‍ಮೂಲೆ ತನ್‍ಬೀಹುಲ್ ಇಸ್ಲಾಂ ಹೈಯರ್ ಸೆಕೆಂಡರಿ ಶಾಲೆಯ ಪ್ಲಟೂನ್‍ಗಳು, ಇರಿಯಣ್ಣಿ ಸರ್ಕಾರಿ ವೃತ್ತಿಪರ ಪ್ರೌಢಶಾಲೆ, ಮಾಧ್ಯಮಿಕ ಶಾಲೆ, ಚೆಮ್ನಾಡ್ ಜಮಾ ಅತ್ ಹೈಯರ್ ಸೆಕೆಂಡರಿ ಶಾಲೆ, ಉದಿನೂರು ಸರ್ಕಾರಿ ಹೈಯರ್ ಸೆಕೆಂಡರಿ ಶಾಲಾ ವಿದ್ಯಾರ್ಥಿಪೊಲೀಸ್, ಕಾಸರಗೋಡು ಸರ್ಕಾರಿ ಕಾಲೇಜು, ಕಾಞಂಗಾಡ್ ನೆಹರು ಕಲಾ ಮತ್ತು ವಿಜ್ಞಾನ ಕಾಲೇಜು, ಕಾಞಂಗಾಡ್ ದುರ್ಗಾ ಹೈಯರ್ ಸೆಕೆಂಡರಿ ಶಾಲೆ, ನೀಲೇಶ್ವರ ರಾಜಾಸ್ ಹೈಯರ್ ಸೆಕೆಂಡರಿ ಶಾಲೆ, ಚೆಮ್ನಾಡು ಸರ್ಕಾರಿ ಹೈಯರ್ ಸೆಕೆಂಡರಿ ಶಾಲೆ, ಕಾರಡ್ಕ ಸರ್ಕಾರಿ ವೃತ್ತಿಪರ ಪ್ರೌಢಶಾಲೆಗಳ ಎನ್‍ಸಿಸಿ, ಕಾಞಂಗಾಡ್ ದುರ್ಗಾ ಪ್ರೌಢಶಾಲೆ ಸ್ಕೌಟ್ ಮತ್ತು ಗೈಡ್, ಕಾಸರಗೋಡು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಸ್ಕೌಟ್ ಮತ್ತು ಗೈಡ್, ಪೆರಿಯ ಜವಾಹರ ನವೋದಯ ವಿದ್ಯಾಲಯ ಹಾಗೂ ಉಳಿಯತ್ತಡ್ಕದ ಜೈ ಮಾತಾ ಹಿರಿಯ ಮಾಧ್ಯಮಿಕ ಶಾಲಾ ಬ್ಯಾಂಡ್ ಸೆಟ್ ಮತ್ತು ಎಸ್‍ಪಿಸಿ ಶಿಕ್ಷಕರ ಪ್ಲಟೂನ್‍ಗಳು ಪಥಸಂಚಲನದಲ್ಲಿ ಪಾಲ್ಗೊಳ್ಳಲಿದೆ.

