HEALTH TIPS

11 ರಂದು ಉತ್ತರ ಮಲಬಾರ್ ತೀಯಾ ಸಮುದಾಯದಿಂದ ಧಾರ್ಮಿಕ ಸಮಾವೇಶ

ಕಾಸರಗೋಡು: ಉತ್ತರಮಲಬಾರ್ ತೀಯಾ ಸಮುದಾಯ ದೇವಾಲಯ ಸಂರಕ್ಷಣಾ ಸಮಿತಿಯ ಧಾರ್ಮಿಕ ಸಮಾವೇಶ ಆ.11 ರಂದು ಪೆರಿಯ ಎಸ್.ಎನ್. ಕಾಲೇಜು ಸಭಾಂಗಣದಲ್ಲಿ ನಡೆಯಲಿದ್ದು, ಕಣ್ಣೂರು ಮತ್ತು ಕಾಸರಗೋಡು ಜಿಲ್ಲೆಗಳ ವಿವಿಧ ಸಮುದಾಯ ದೇವಾಲಯಗಳಿಂದ ಸುಮಾರು 1500 ಧಾರ್ಮಿಕ ಕಾರ್ಯಕರ್ತರು ಭಾಗವಹಿಸಲಿದ್ದಾರೆ ಎಂದು ಸಂಘಟನೆ ಅಧ್ಯಕ್ಷ ಸಿ. ರಾಜನ್ ಪೆರಿಯ ಸುದ್ದಿಗೋಷ್ಠೀಯಲ್ಲಿ ತಿಳಿಸಿದ್ದಾರೆ. 

ಅಂದು ಬೆಳಗ್ಗೆ 10ಕ್ಕೆ ನಡೆಯುವ ಸಮಾರಂಭವನ್ನು ಸಹಕಾರಿ ದೇವಸ್ವಂ ಖಾತೆ ಸಚಿವ ವಿ. ಎನ್. ವಾಸವನ್ ಉದ್ಘಾಟಿಸುವರು. ಉತ್ತರ ಮಲಬಾರ್ ತೀಯಾ ಸಮುದಾಯ ದೇವಾಲಯ ರಕ್ಷಣಾ ಸಮಿತಿಯ ಅಧ್ಯಕ್ಷ, ಪೆರಿಯ ಎಸ್.ಎನ್ ಕಾಲೇಜು ಟ್ರಸ್ಟ್‍ನ ಅಧ್ಯಕ್ಷ ಸಿ. ರಾಜನ್ ಪೆರಿಯ ಅಧ್ಯಕ್ಷತೆ ವಹಿಸುವರು.   ಸಂಸದ ರಾಜಮೋಹನ್ ಉಣ್ಣಿತ್ತಾನ್ ಮುಖ್ಯ ಅತಿಥಿಯಾಗಿ ಭಾಗವಹಿಸುವರು. ಶಾಸಕರಾದ ಎಂ. ರಾಜಗೋಪಾಲನ್, ಸಿ.ಎಚ್. ಕುಂಞಂಬು, ಇ. ಚಂದ್ರಶೇಖರನ್, ಎ.ಕೆ.ಎಂ.ಅಶ್ರಫ್, ಟಿ.ಐ.ಮಧುಸೂದನನ್, ಮಲಬಾರ್ ದೇವಸ್ವಂ ಮಂಡಳಿ ಅಧ್ಯಕ್ಷ ಓ.ಕೆ.ವಾಸು, ಪುಲ್ಲೂರು ಪೆರಿಯಾ ಗ್ರಾಮ ಪಂಚಾಯಿತಿ  ಅಧ್ಯಕ್ಷ ಸಿ.ಕೆ.ಅರವಿಂದನ್ ಅತಿಥಿಗಳಾಗಿ ಭಾಗವಹಿಸುವರು. 

ಕೋಲಾಧಾರಿಗಳು ಮತ್ತು ಸಮುದಾಯದ ದೇವಾಲಯಗಳ ಅರ್ಚಕರು ಸೇರಿದಂತೆ ಸುಮಾರು 2200 ಜನರಿಗೆ ತಿಂಗಳಿಗೆ 1600 ರೂ.ಗಳ ಆರ್ಥಿಕ ಸಹಾಯವನ್ನು ನೀಡಲಾಗುತ್ತಿದ್ದು,  ಈ ಮೊತ್ತವನ್ನು 2ಸಾವಿರಕ್ಕೆ ಹೆಚ್ಚಿಸಬೇಕು, ಕಣ್ಣೂರು ಮತ್ತು ಕಾಸರಗೋಡು ಜಿಲ್ಲೆಗಳಲ್ಲಿರುವ ಸಮುದಾಯದ ದೇವಾಲಯದ ಅಧಿಕಾರಿಗಳನ್ನು ದೇವಸ್ವಂ ಮಂಡಳಿಯ ನೌಕರರೆಂದು ಪರಿಗಣಿಸುವಂತೆ ಮಾವೇಶದಲ್ಲಿ ಆಗ್ರಹಿಸಲಾಗುವುದು ಎಂದು ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ  ಪ್ರಧಾನ ಕಾರ್ಯದರ್ಶಿ ನಾರಾಯಣನ್ ಚೂರಿತೋಡ್, ಕಾಸರಗೋಡು ವಲಯ ಅಧ್ಯಕ್ಷ ಕುಞÂಕಣ್ಣನ್ ಬೇಡಡ್ಕ,  ಕಾರ್ಯದರ್ಶಿ ವಿಜಯಕುಮಾರ್, ಸತ್ಯನ್ ಮಠತ್ತಿಲ್ ಉಪಸ್ಥಿತರಿದ್ದರು.








ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries