ಕಾಸರಗೋಡು: ಜಿಲ್ಲೆಯಲ್ಲಿ ಮೀನು ಸಾಕಣೆ ಮತ್ತು ಮೀನುಗಾರಿಕೆ ಕ್ಷೇತ್ರಗಳಲ್ಲಿ ಸಮಾನಾಂತರ ಅಭಿವೃದ್ಧಿ ನಡೆಯುತ್ತಿದ್ದು, ಉತ್ತರದಲ್ಲಿ ಮಂಜೇಶ್ವರ ಕಣ್ವತೀರ್ಥದಿಂದ ದಕ್ಷಿಣದಲ್ಲಿ ತಯ್ಯಲ್ ಕಡಪ್ಪುರದ ವರೆಗೆ 70 ಕಿ.ಮೀ ವ್ಯಾಪ್ತಿಯಲ್ಲಿ ಮೀನುಗಾರಿಕೆಗೆ ವಿಪುಲ ಅವಕಾಶಲಭ್ಯವಾಗುತ್ತಿದೆ. ಕಾಸರಗೋಡು ಜಿಲ್ಲೆಯಲ್ಲಿ ಒಳನಾಡಿನ ಮೀನುಗಾರಿಕಾ ಗ್ರಾಮ ಸೇರಿದಂತೆ 17 ಮೀನುಗಾರಿಕಾ ಗ್ರಾಮಗಳಿದ್ದು, 14,218 ಸಕ್ರಿಯ ಮೀನುಗಾರರು ಮತ್ತು 2,419 ಮೀನು ಸಂಬಂಧಿತ ಯೋಜನೆಗಳಲ್ಲಿ ಕೆಲಸ ನಿರ್ವಹಿಸುತ್ತಿದ್ದಾರೆ. ಕಳೆದ 9 ವರ್ಷಗಳಲ್ಲಿ, ಜಿಲ್ಲೆ
ಮೀನುಗಾರಿಕೆ ಇಲಾಖೆ ಮೀನುಗಾರಿಕಾ ಕ್ಷೇತ್ರದ ಅಭಿವೃದ್ಧಿಗಾಗಿ ಹಲವಾರು ಚಟುವಟಿಕೆ ಕೈಗೆತ್ತಿಕೊಳ್ಳಲಾಗಿದೆ. ಇದು ಒಳನಾಡಿನ ಸಾರ್ವಜನಿಕ ಜಲಮೂಲಗಳಲ್ಲಿ ಮೀನು ಸಂಪನ್ಮೂಲಗಳ ಹೆಚ್ಚಳಕ್ಕೆ ಕಾರಣವಾಗಿದೆ ಮತ್ತು ಈ ಮೂಲಕ ಜೀವನೋಪಾಯಕ್ಕಾಗಿ ಮೀನುಗಾರಿಕೆಯನ್ನು ಅವಲಂಬಿಸಿರುವ ಮೀನುಗಾರರಿಗೆ ಹೆಚ್ಚಿನ ಪ್ರಯೋಜನವೂ ಲಭಿಸಿದೆ. ಮೀನು ಉತ್ಪಾದನೆಯನ್ನು ಹೆಚ್ಚಿಸಲು, ಪಾಪ್ಯುಲರ್ ಫಿಶ್ ಫಾಮಿರ್ಂಗ್, ಪಿಎಂಎಂಎಸ್‍ವೈ ಮತ್ತು ವಿವಿಧ ಸ್ಥಳೀಯಾಡಳಿತ ಸಂಸ್ಥೆಗಳ ಯೋಜನೆಗಳ ಮೂಲಕ ಪಡುತಕುಳಂನಲ್ಲಿ ಮೀನು ಸಾಕಣೆ, ಬಯೋಫ್ಲಾಕ್, ಅಲಂಕಾರಿಕ ಮೀನು ಸಾಕಣೆ, ಸಿಹಿನೀರಿನ ಕೊಳಗಳಲ್ಲಿ ಮೀನು ಸಾಕಣೆಯಂತಹ ಉಪ ಯೋಜನೆಗಳನ್ನು ಜಾರಿಗೊಳಿಸಲಾಗುತ್ತಿರುವುದಾಗಿ ಜಿಲ್ಲಾ ಮೀನುಗಾರಿಕಾ ಇಲಾಖೆ ತಿಳಿಸಿದೆ.
ಕಲ್ಲುಚಿಪ್ಪು(ಪಚ್ಚಿಲೆ)ಕೃಷಿಗೆ ವಿಪುಲ ಅವಕಾಶ:
ಕಾಸರಗೋಡು ಜಿಲ್ಲೆಯ ತ್ರಿಕರಿಪುರದಿಂದ ನೀಲೇಶ್ವರದವರೆಗೆ ವಿಸ್ತರಿಸಿರುವ ಕವ್ವಾಯಿ ಹಿನ್ನೀರು ಪ್ರದೇಶ ಮತ್ತು ಅದಕ್ಕೆ ಸಂಬಂಧಿಸಿದ ಜಲಮೂಲಗಳು ಉತ್ತರ ಕೇರಳದಲ್ಲಿ ಕಲ್ಲುಚಿಪ್ಪು ಕೃಷಿಯನ್ನು ಕೈಗೊಳ್ಳುವ ಪ್ರಮುಖ ಕೇಂದ್ರಗಳಾಗಿವೆ. ಅಕ್ಟೋಬರ್ ನಿಂದ ಮೇ ವರೆಗೆ ಪ್ರತಿವರ್ಷ ಸಾವಿರಕ್ಕೂ ಹೆಚ್ಚು ರೈತರು ಈ ಭೂಮಿಯನ್ನು ಕಲ್ಲುಚಿಪ್ಪು ಕೃಷಿಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಈ ಪ್ರದೇಶದ ಕೃಷಿಕರು ಗುಣಮಟ್ಟದ ಬೀಜ ಹೊಂದುವಲ್ಲಿ ಪಡುವ ಶೋಷಣೆ ತಡೆಗಟ್ಟಲು ಮತ್ತು ಕಲ್ಲುಚಿಪ್ಪು ಕೃಷಿಯನ್ನು ಉತ್ತೇಜಿಸಲು, ಸ್ಥಳೀಯಾಡಳಿತ ಸಂಸ್ಥೆ ಪ್ರತ್ಯೇಕ ಪರಿಗಣನೆ ನೀಡುತ್ತಿದೆ. ಸುಸ್ಥಿರ ಅಭಿವೃದ್ಧಿ ಮತ್ತು ಸಂರಕ್ಷಣೆಗೆ ಒತ್ತು ನೀಡಲಾಗುತ್ತಿದ್ದು, ಸ್ಥಳೀಯಾಡಳಿತ ಸಂಸ್ಥೆಗಳಲ್ಲಿ ರೈತರಿಗೆ ಜಾಗೃತಿ ತರಗತಿಗಳನ್ನು ಆಯೋಜಿಸಲಾಗುತ್ತಿದೆ.
ಜಿಲ್ಲೆಯಲ್ಲಿ ಸೊಸೈಟಿ ಮೂಲಕ ಬೀಜಗಳನ್ನು ವಿತರಿಸಲು ನಿರ್ಧರಿಸಲಾಗಿದ್ದು, 50 ಕೆಜಿ ಬೀಜದ ಚೀಲಕ್ಕೆ ಪ್ರತಿ ಕೆಜಿಗೆ 75 ರೂ. ನ್ಯಾಯಯುತ ಬೆಲೆ, 2.5 ರೂ. ಸೊಸೈಟಿ ನಿರ್ವಹಣಾ ಶುಲ್ಕ ಮತ್ತು ವಹಿವಾಟು ಶುಲ್ಕ ಸೇರಿದಂತೆ 50ಕಿಲೋದದ ಚೀಲಕ್ಕೆ 4700 ರೂ. ನಿಗದಿಪಡಿಸಲಾಗಿದೆ. ಈ ಮೂಲಕ ಎಲ್ಲಾ ರೈತರಿಗೆ ನ್ಯಾಯಯುತ ಬೆಲೆಯಲ್ಲಿ ಬೀಜಗಳನ್ನು ಪಡೆಯಲು ಸಾಧ್ಯವಾಗುತ್ತಿದೆ. ರಾಜ್ಯದಲ್ಲಿ ಮೊದಲ ಬಾರಿಗೆ ಮಹಿಳೆಯರನ್ನು ಕೇಂದ್ರೀಕರಿಸಿ ಕೊಳದಲ್ಲಿ ಸಿಗಡಿ ಸಾಕಾಣಿಕೆಯನ್ವಯ ಮೂರು ಯೂನಿಟ್‍ಗಳು ಕಾರ್ಯಾಚರಿಸುತ್ತಿದೆ.
ಮೀನುಗಾರರ ಮಕ್ಕಳಿಗೆ ಶಾಲೆ:
ಜಿಲ್ಲೆಯ ಕರಾವಳಿ ಪ್ರದೇಶದಲ್ಲಿಇದು ಮೀನುಗಾರರ ಹೆಣ್ಣುಮಕ್ಕಳಿಗೆ ಆಧುನಿಕ ಶಿಕ್ಷಣವನ್ನು ನೀಡುವ ನಿಟ್ಟಿನಲ್ಲಿ ಕಾಞಂಗಾಡ್‍ನಲ್ಲಿ ಆರಂಭಿಸಲಾಗಿರುವ ಜಿಆರ್‍ಎಫ್‍ಟಿ ಪ್ರೌಢಶಾಲೆ ನಿರಂತರವಾಗಿ ಶೇ. 100 ಫಲಿತಾಂಶ ದಾಖಲಿಸಿಕೊಮಡು ಬರುತ್ತಿದೆ. 2002 ರಲ್ಲಿ ರಾಜ್ಯದ ಮೀನುಗಾರಿಕಾ ಇಲಾಖೆಯ ಅಧೀನದಲ್ಲಿ ಚಟುವಟಿಕೆ ನಡೆಸುತ್ತಿದ್ದು, 2015ರಲ್ಲಿ ಸ್ವಂತ ಕಟ್ಟಡಕ್ಕೆ ಸ್ಥಳಾಂತರಗೊಂಡಿದೆ. ಪ್ರಸಕ್ತ ನ8ರಿಂದ ಹತ್ತರ ವರೆಗೆ 62 ವಿದ್ಯಾರ್ಥಿಗಳು ವಾಸ್ತವ್ಯದೊಂದಿಗೆ ಅಧ್ಯಯನ ಮಾಡುತ್ತಿದ್ದಾರೆ. ಮೀನುಗಾರ ಕುಟುಂಬದ ವಿದ್ಯಾರ್ಥಿನಿಯರಿಗೆ ಲ್ಯಾಪ್‍ಟಾಪ್ ಮತ್ತು ಪೀಠೋಪಕರಣಗಳನ್ನು ಒದಗಿಸಲಾಗುತ್ತಿದೆ.
ಪುನರ್ವಸತಿ:
ಜಿಲ್ಲೆಯ ಕರಾವಳಿಯ 50 ಮೀಟರ್ ವ್ಯಾಪ್ತಿಯಲ್ಲಿ ವಾಸಿಸುವ ಮೀನುಗಾರಿಕಾ ಕುಟುಂಬಗಳನ್ನು ಸುರಕ್ಷಿತ ಪ್ರದೇಶಕ್ಕೆ ಸ್ಥಳಾಂತರಿಸಲು 'ಪುನರ್‍ಗೇಹಂ' ಯೋಜನೆಯಡಿಯನ್ವಯ ಆಸ್ತಿ ಮತ್ತು ಮನೆಗಳನ್ನು ಖರೀದಿಸಲು 140.74 ಕೋಟಿ ರೂ.ಮಂಜೂರುಮಾಡಲಾಗಿದೆ. ಯೋಜನೆಯಲ್ಲಿ 344ಮಂದಿ ಮೀನುಗಾರ ಫಲಾನುಭವಿಗಳಿದ್ದು, ಕೊಯಿಪ್ಪಾಡಿ ಕಡಪ್ಪುರದಲ್ಲಿ 144ವಸತಿ ಸಮುಚ್ಛಯವುಳ್ಳ ಫ್ಲ್ಯಾಟ್ ನಿರ್ಮಾಣಹಂತದಲ್ಲಿದೆ.
POTOS: ತ್ರಿಕ್ಕರಿಪುರದಲ್ಲಿ ಕಲ್ಲುಚಿಪ್ಪು ಕೃಷಿಗಾಗಿ ಪೂರ್ವತಯಾರಿಯಲ್ಲಿ ತೊಡಗಿಸಿಕೊಂಡಿರುವ ಮೀನು ಕಾರ್ಮಿಕರು.
: ಮೀನಿನ ಸಂತತಿ ಹೆಚ್ಚಳಕ್ಕೆ ಜಲಮೂಲಗಳಲ್ಲಿ ಮೀನಿನ ಮರಿಗಳ ಅಳವಡಿಕೆ.



