ಕಾಸರಗೋಡು: ಪತ್ನಿಗೆ ಸೌಂದರ್ಯವಿಲ್ಲವೆಂದು ತಿಳಿಸಿ ನಿರಂತರ ದೈಹಿಕ ಹಾಗೂ ಮಾನಸಿಕ ಕಿರುಕುಳಕ್ಕೆ ನೀಡಿದ ಪ್ರಕರಣಕ್ಕೆ ಸಂಬಂಧಿಸಿ ಪತಿ, ಚಿತ್ತಾರಿಕ್ಕಲ್ ಕಡುಮೇನಿ ನಿವಾಸಿ ಪ್ರಿನ್ಸ್ ಜೋಸೆಫ್ ಎಂಬಾತನ ವಿರುದ್ಧ ಚಿತ್ತಾರಿಕ್ಕಲ್ ಠಾಣೆ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ.
ಪ್ರಿನ್ಸ್ ಜೋಸೆಫ್ ವಿವಾಹ 2016 ಜೂನ್ 20ರಂದು ನಡೆದಿದ್ದು, ಇತ್ತೀಚಿನ ವರ್ಷಗಳಿಂದ ಸೌಂದರ್ಯವಿಲ್ಲವೆಂದು ತಿಳಿಸಿ ನಿರಂತರ ಮಾನಸಿಕ, ದೈಹಿಕ ಕಿರುಕುಳ ನೀಡುತ್ತಿರುವುದಾಗಿ ಗೃಹಿಣಿ ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.

