ಮಂಜೇಶ್ವರ: ಕುಂಜತ್ತೂರು ಪದವಿನಲ್ಲಿ ಬಾಡಿಗೆ ಕೊಠಡಿಯಲ್ಲಿ ವಾಸಿಸುತ್ತಿದ್ದ, ಬಿಹಾರ ಮೋತಿಹರಿ ಜಿಲ್ಲೆಯ ನಿವಾಸಿ ರಾಹುಲ್‍ಕುಮಾರ್(17)ನಾಪತ್ತೆಯಾಗಿರುವ ಬಗ್ಗೆ ಮಂಜೇಶ್ವರ ಠಾಣೆ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ.
ಕುಂಜತ್ತೂರು ಪದವಿನಲ್ಲಿರುವ ಪೀಠೋಪಕರಣ ಸಂಸ್ಥೆಯೊಂದರಲ್ಲಿ ಸಹೋದರನ ಜತೆ ಕೆಲಸ ನಿರ್ವಹಿಸುತ್ತಿದ್ದನು. ಗುರುವಾರ ನಸುಕಿಗೆ ವಾಸಸ್ಥಳದಿಂದ ನಾಪತ್ತಯಾಗಿರುವ ಬಗ್ಗೆ ಈತನ ಸಹೋದರ ವಿಶಾಲ್‍ಕುಮಾರ್ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.

