: ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಕಾಸರಗೋಡು ಇದರ ಸಪ್ತತಿ ಮಹೋತ್ಸವದ ಅಂಗವಾಗಿ ಹಮ್ಮಿಕೊಂಡಿರುವ ಕುಂಬಳೆ ಸೀಮೆಯ ನಾಲ್ಕು ಕಾರಣಿಕ ದೇವಸ್ಥಾನಕ್ಕೆ ನಾಮ ಜಪಯಾತ್ರೆಯ ದ್ವಿತೀಯ ಹಂತದ ಯಾತ್ರೆ ಆ. 10ರಂದು ಜರುಗಲಿದೆ.
ಅಂದು ಬೆಳಿಗ್ಗೆ 5.15ಕ್ಕೆ ಕಾಸರಗೋಡು ಶ್ರೀ ಮಲ್ಲಿಕಾರ್ಜುನ ದೇವಸ್ಥಾನದ ವಠಾರದಿಂದ ಆರಂಭಿಸಿ ಮಧೂರು ಶ್ರೀ ಮದನಂತೇಶ್ವರ ಸಿದ್ಧಿ ವಿನಾಯಕ ದೇವಸ್ಥಾನ, ಮುಜಂಗಾವು ಶ್ರೀ ಪಾರ್ಥಸಾರಥಿ ದೇವಸ್ಥಾನ ಮೂಲಕ ಸಾಗಿ, ಕುಂಬಳೆ ಕಣಿಪುರ ಶ್ರೀ ಗೋಪಾಲಕೃಷ್ಣ ದೇವಸ್ಥಾನಕ್ಕೆ ತಲುಪಲಾಗುವುದು. ಮಧ್ಯಾಹ್ನ 12.30ಕ್ಕೆ ಮಹಾಪೂಜೆಯಲ್ಲಿ ಪಾಲ್ಗೊಂಡು, ಪ್ರಸಾದ ಸ್ವೀಕರಿಸಿ ವಾಪಸಾಗುವುದು. ನಾಮಜಪ ಯಾತ್ರೆಯನ್ನು ಯಶಸ್ವಿಗೊಳಿಸುವ ನಿಟ್ಟಿನಲ್ಲಿ ಸಪ್ತತಿ ಮಹೋತ್ಸವ ಸಮಿತಿ ಹಾಗೂ ಎಲ್ಲಾ ಉಪಸಮಿತಿ ಸದಸ್ಯರು ಹಾಗೂ ಭಗವದ್ಭಕ್ತರು ಜಪ ಯಾಥ್ರೆಯಲ್ಲಿ ಪಾಲ್ಗೊಳ್ಳುವಂತೆ ಪ್ರಕಟಣೆ ತಿಳಿಸಿದೆ.

