ಕಾಸರಗೋಡು: ಶ್ರೀ ಕೃಷ್ಣ ಜನ್ಮಾಷ್ಟಮಿ, ಬಾಲದಿನಾಚರಣೆ ಸಮಿತಿ ಆಶ್ರಯದಲ್ಲಿ ಸೆಪ್ಟಂಬರ್ 14 ರಂದು ಶ್ರೀ ಮಲ್ಲಿಕಾರ್ಜುನ ದೇವಸ್ಥಾನದಲ್ಲಿ ಜರಗುವ ಶ್ರೀ ಕೃಷ್ಣ ಜನ್ಮಾಷ್ಟಮಿ ಮಹೋತ್ಸವ ದ ಆಮಂತ್ರಣ ಪತ್ರಿಕೆ ಬಿಡುಗಡೆ ಸಮಾರಂಭ ಕಾಸರಗೋಡಿನಲ್ಲಿ ಜರುಗಿತು.
ಕಾಸರಗೋಡು ಗೋಕುಲ ಜಿಲ್ಲಾ ರಕ್ಷಾಧಿಕಾರಿ ಜಯರಾಮ ಶೆಟ್ಟಿ ಇವರು ವಿಶ್ವ ಹಿಂದೂ ಪರಿಷತ್ ಕಾಸರಗೋಡು ಜಿಲ್ಲಾ ಸತ್ಸಂಗ ಪ್ರಮುಖ್ ಡಾ. ಗಣೇಶ್ ಕುಮಾರ್ ಇವರಿಗೆ ನೀಡುವ ಮುಲಕ ಬಿಡುಗಡೆಗೊಳಿಸಿದರು.
ಈ ಸಂದರ್ಭ ವಿ.ಎಚ್.ಪಿ. ಕಾಸರಗೋಡು ಪ್ರಖಂಡ ಗೌರವಾಧ್ಯಕ್ಷ ಡಾ. ಕೆ.ಎನ್.ವೆಂಕಟ್ರಮಣ ಹೊಳ್ಳ, ಧಾರ್ಮಿಕ ನೇತಾರರಾದ ದೇವದಾಸ್ ನುಳ್ಳಿಪ್ಪಾಡಿ, ಲಕ್ಷ್ಮೀಕಾಂತ್ ಬೀರಂತಬೈಲ್, ಗುಣಪಾಲ ಅಮೈ, ಕಮಲೇಶ್ ಕೇಳುಗುಡ್ಡೆ, ರವಿ ಕೇಸರಿ, ಮೀರಾ ಕಾಮತ್, ವಿ.ಎಚ್.ಪಿ. ಮಾತೃ ಮಂಡಳಿ ಅಧ್ಯಕ್ಷೆ ಶಾರದಾ ಎಸ್. ರಾವ್, ಶೋಭಾ ದೇವದಾಸ್, ಕಿಶೋರ್ ಕುಮಾರ್, ತುಕಾರಾಮ ಆಚಾರ್ಯ ಕೆರೆಮನೆ, ಮದುಸೂದನ ಆಚಾರ್ಯ, ಕೆ.ವಿ.ತಿರುಮಲೇಶ ಹೊಳ್ಳ, ಪ್ರಶಾಂತ್ ಬೀರಂತಬೈಲ್, ಬಾಲಗೋಕುಲದ ಮಕ್ಕಳು ಉಪಸ್ಥಿತರಿದ್ದರು.


