ಹೈದರಾಬಾದ್ : ಮುಸ್ಲಿಂಮರಿಗೆ ಪ್ರತ್ಯೇಕ ಮೀಸಲಾತಿ ಒದಗಿಸುವಂತೆ ಆಗ್ರಹಿಸಿ ಬಿಆರ್‌ಎಸ್ ಪಕ್ಷದ ಎಂಎಲ್‌ಸಿ ಕೆ.ಕವಿತಾ ಅವರು 72 ಗಂಟೆಗಳ ಉಪವಾಸ ಸತ್ಯಾಗ್ರಹ ಕೈಗೊಂಡಿದ್ದಾರೆ.
ಶಿಕ್ಷಣ, ಉದ್ಯೋಗ ಮತ್ತು ರಾಜಕೀಯ ಪ್ರಾತಿನಿಧ್ಯದಲ್ಲಿ ಹಿಂದುಳಿದ ವರ್ಗಗಳ ಮೀಸಲಾತಿಯನ್ನು ಶೇ 23ರಿಂದ 42ಕ್ಕೆ ಹೆಚ್ಚಿಸುವ ಮಸೂದೆಯನ್ನು ತೆಲಂಗಾಣ ಸರ್ಕಾರ ಅಂಗೀಕರಿಸಿತ್ತು.
ತೆಲಂಗಾಣ ಸರ್ಕಾರವು ಹಿಂದುಳಿದ ವರ್ಗಗಳ ಮೀಸಲಾತಿ ಕೋಟಾದಲ್ಲಿ ಮುಸ್ಲಿಂರನ್ನು ಸೇರ್ಪಡೆಗೊಳಿಸದೆ, ಮುಸ್ಲಿಂಮರಿಗೆ ಪ್ರತ್ಯೇಕ ಶೇ10 ಮೀಸಲಾತಿ ಒದಗಿಸಬೇಕೆಂದು ಒತ್ತಾಯಿಸಿ ನಗರದ ಇಂದಿರಾ ಪಾರ್ಕ್ ಬಳಿ ಉಪವಾಸ ಸತ್ಯಾಗ್ರಹ ಕೈಗೊಂಡಿದ್ದಾರೆ.
ಮುಸ್ಲಿಂಮರಿಗೆ ಶೇ 42 ಮೀಸಲಾತಿ ಕೋಟಾದ ಭಾಗವಾಗಿದ್ದರೆಯೇ ಎಂಬುವುದನ್ನು ಖಚಿತಪಡಿಸಬೇಕೆಂದೂ ಕವಿತಾ ಆಗ್ರಹಿಸಿದ್ದಾರೆ.
ಕವಿತಾ ಕೈಗೊಂಡಿರುವ ಉಪವಾಸ ಸಂಬಂಧ ಪ್ರತಿಕ್ರಿಯಿಸಿದ ರಾಜ್ಯ ಹಿಂದುಳಿದ ವರ್ಗಗಳ ಸಚಿವ ಪೊನ್ನಂ ಪ್ರಭಾಕರ್, ಈ ವಿಷಯದ ಬಗ್ಗೆ ನಿರ್ಧಾರವನ್ನು ರಾಷ್ಟ್ರ ರಾಜಧಾನಿಯಲ್ಲಿ ತೆಗೆದುಕೊಳ್ಳಬೇಕಾಗಿರುವುದರಿಂದ ಕವಿತಾ ತಮ್ಮ ಉಪವಾಸವನ್ನು ದೆಹಲಿಗೆ ಸ್ಥಳಾಂತರಿಸುವುದು ಉತ್ತಮ ಎಂದು ಹೇಳಿದ್ದಾರೆ.
ಹಿಂದುಳಿದ ವರ್ಗಗಳ (ಬಿ.ಸಿ) ಮೀಸಲಾತಿಯನ್ನು ಶೇ 42ಕ್ಕೆ ಏರಿಸುವ ಮತ್ತು ಪರಿಶಿಷ್ಟ ಜಾತಿಯ (ಎಸ್‌ಸಿ) ಉಪವರ್ಗೀಕರಣಕ್ಕೆ ಸಂಬಂಧಿಸಿದ ಎರಡು ಮಹತ್ವದ ಮಸೂದೆಗಳಿಗೆ ತೆಲಂಗಾಣ ವಿಧಾನಸಭೆ ಮಾರ್ಚ್‌ನಲ್ಲಿ ಅಂಗೀಕಾರ ನೀಡಿತ್ತು.
ಸರ್ಕಾರ ರಾಷ್ಟ್ರಪತಿಗಳ ಒಪ್ಪಿಗೆಗಾಗಿ ಕಾಯುತ್ತಿದೆ. ಹಿಂದುಳಿದ ವರ್ಗಗಳ ಮೀಸಲಾತಿ ಮಸೂದೆಗಳಿಗೆ ರಾಷ್ಟ್ರಪತಿಗಳ ಅನುಮೋದನೆ ನೀಡುವಂತೆ ಒತ್ತಾಯಿಸಿ ಮುಖ್ಯಮಂತ್ರಿ ಎ.ರೇವಂತ್ ರೆಡ್ಡಿ ಮತ್ತು ಇತರೆ ಕಾಂಗ್ರೆಸ್ ನಾಯಕರು ಆಗಸ್ಟ್ 6ರಂದು ದೆಹಲಿಯ ಜಂತರ್ ಮಂತರ್‌ನಲ್ಲಿ ಧರಣಿ ನಡೆಸಲು ಮುಂದಾಗಿದ್ದಾರೆ ಎಂದು ಕವಿತಾ ತಿಳಿಸಿದ್ದಾರೆ.

