HEALTH TIPS

ಮೋದಿ ನೇತೃತ್ವಕ್ಕೆ 25 ವರ್ಷ; ದೇಶದ ಪ್ರಗತಿಗೆ ನಿರಂತರ ಪ್ರಯತ್ನ ಎಂದು ಹೇಳಿಕೆ

ನವದೆಹಲಿ: ಆಡಳಿತ ಚುಕ್ಕಾಣಿ ಹಿಡಿದಿರುವುದಕ್ಕೆ ಸಂಬಂಧಿಸಿ ಪ್ರಧಾನಿ ನರೇಂದ್ರ ಮೋದಿ ಅವರು ಮಂಗಳವಾರ 25ನೇ ವರ್ಷಕ್ಕೆ ಪದಾರ್ಪಣೆ ಮಾಡಿದರು.

ಈ ವೇಳೆ, ಸಾಮಾಜಿಕ ಜಾಲತಾಣ 'ಎಕ್ಸ್‌'ನಲ್ಲಿ ಸರಣಿ ಪೋಸ್ಟ್‌ ಮಾಡಿರುವ ಅವರು, 'ದೇಶದ ಪ್ರಗತಿಗೆ ಹಾಗೂ ಜನರ ಜೀವನ ಮಟ್ಟ ಸುಧಾರಿಸುವುದಕ್ಕೆ ನನ್ನ ನಿರಂತರ ಪ್ರಯತ್ನ ನಿಲ್ಲುವುದಿಲ್ಲ' ಎಂದಿದ್ದಾರೆ

'2001ರ ಅಕ್ಟೋಬರ್ 7ರಂದು ಮೊದಲ ಬಾರಿಗೆ ಗುಜರಾತ್‌ ಮುಖ್ಯಮಂತ್ರಿಯಾಗಿ ನಾನು ಅಧಿಕಾರ ಸ್ವೀಕರಿಸಿದೆ. ಮೊದಲು ನನ್ನ ತವರು ರಾಜ್ಯದಲ್ಲಿ ಹಲವಾರು ಸುಧಾರಣೆಗಳನ್ನು ತಂದೆ ನಂತರ ದೇಶದ ಅಭಿವೃದ್ದಿಗೆ ಶ್ರಮಿಸುತ್ತಿರುವೆ' ಎಂದು ಹೇಳಿದ್ದಾರೆ.

'ಸರ್ಕಾರವೊಂದರ ಮುಖ್ಯಸ್ಥನಾಗಿ ಸೇವೆ ಸಲ್ಲಿಸುವುತ್ತಿರುವುದಕ್ಕೆ ಸಂಬಂಧಿಸಿ 25ನೇ ವರ್ಷಕ್ಕೆ ಪದಾರ್ಪಣೆ ಮಾಡುತ್ತಿದ್ದು, ಈ ವಿಚಾರವಾಗಿ ನನಗೆ ಸತತವಾಗಿ ಆಶೀರ್ವದಿಸುತ್ತಿರುವ ದೇಶದ ಜನತೆಗೆ ಧನ್ಯವಾದಗಳು' ಎಂದು ಹೇಳಿದ್ದಾರೆ.

'ಯುಪಿಎ ಸರ್ಕಾರದ ಅವಧಿಯಲ್ಲಿ ದೇಶವು ಭ್ರಷ್ಟಾಚಾರ, ಕೆಟ್ಟ ನೀತಿಗಳು ಹಾಗೂ ಸ್ವಜನ ಪಕ್ಷಪಾತರದಿಂದ ನಲುಗಿತ್ತು. ಸದ್ಯ, ವಿಶ್ವದಲ್ಲಿಯೇ ಬೃಹತ್‌ ಆರೋಗ್ಯಸೇವೆ ಹಾಗೂ ಸಾಮಾಜಿಕ ಭದ್ರತೆ ಯೋಜನೆಗಳಿಗೆ ದೇಶ ಸಾಕ್ಷಿಯಾಗಿದೆ' ಎಂದೂ ಹೇಳಿದ್ದಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries