ಕಾಸರಗೋಡು: ಶೈಕ್ಷಣಿಕ ಉಪಜಿಲ್ಲಾ ಶಾಲಾ ಕಲೋತ್ಸವ-2025ರ ಲಾಂಛನ ಬಿಡುಗಡೆ ಸಮಾರಂಭ ಕಾಸರಗೋಡು ಸರ್ಕಾರಿ ಹೈಯರ್ ಸೆಕೆಂಡರಿ ಶಾಲೆಯಲ್ಲಿ ಜರುಗಿತು. ಕಾಸರಗೋಡು ಶಾಸಕ ಎನ್.ಎ.ನೆಲ್ಲಿಕುನ್ನು ಅವರು ನಗರಸಭಾ ಅಧ್ಯಕ್ಷ ಅಬ್ಬಾಸ್ ಬೀಗಂ ಅವರಿಗೆ ನೀಡುವ ಮೂಲಕ ಲಾಂಛನ ಬಿಡುಗಡೆಗೊಳಿಸಿದರು.
ನಗರಸಭಾ ಅಧ್ಯಕ್ಷ ಅಬ್ಬಾಸ್ ಬೀಗಂ ಅಧ್ಯಕ್ಷತೆ ವಹಿಸಿದ್ದರು. ಕಣ್ಣೂರು ಪೆÇಡಿಕುಂಡು ನಿವಾಸಿ ವಿ.ಪಿ. ಜ್ಯೋತಿಶ್ ಕುಮಾರ್ ಲಾಂಛನ ವಿನ್ಯಾಸಗೊಳಿಸಿದ್ದರು. ಹಣಕಾಸು ಸಮಿತಿ ಅಧ್ಯಕ್ಷ ಜಹೀರ್ ಆಸಿಫ್, ನೋಂದಣಿ ಸಮಿತಿ ಅಧ್ಯಕ್ಷೆ ರಜಿನಿ ಪ್ರಭಾಕರನ್, ಮಾಧ್ಯಮ ಮತ್ತುಪ್ರಚಾರ ಸಮಿತಿ ಅಧ್ಯಕ್ಷ ಪ್ರದೀಪ್ ನಾರಾಯಣನ್, ಹಿರಿಯ ಸಹಾಯಕಿ ಬಿ. ಉಷಾಕುಮಾರಿ, ಪಿಟಿಎ ಅಧ್ಯಕ್ಷ ಎನ್.ಕೆ. ಉದಯಕುಮಾರ್, ಸಿಬ್ಬಂದಿ ಕಾರ್ಯದರ್ಶಿ ಎನ್. ಅಬ್ದುಲ್ ರಹಮಾನ್, ಎಸ್‍ಎಂಸಿ ಅಧ್ಯಕ್ಷೆ ಆನ್ಸಿ ಮ್ಯಾಥ್ಯೂ, ನಾಸಿಮ್ ಜಹಾಂಗೀರ್ ಡಿ.ಎಸ್ ಪ್ರದೀಪ್ ಕುಮಾರ್ ಉಪಸ್ಥೀತರಿದ್ದರು. ಮುಖ್ಯ ಶಿಕ್ಷಕಿ ಎ ಉಷಾ ಸ್ವಾಗತಿಸಿದರು. ಮಾಧ್ಯಮ ಮತ್ತು ಪ್ರಚಾರ ಸಂಚಾಲಕ ಸಿ.ಕೆ. ಮದನನ್ ವಂದಿಸಿದರು. ನಿಧಿಸಂಗ್ರಹ ಕಾರ್ಯಕ್ರಮದ ಅಂಗವಾಗಿ ಕೆವಿಆರ್ ವತಿಯಿಂದ ನೀಡಿದ ಚೆಕ್ಕನ್ನು ಶಾಸಕ ಎನ್.ಎ. ನೆಲ್ಲಿಕುನ್ನು ಅವರು ಕೆವಿಆರ್‍ನ ಶಿವಶಂಕರನ್ ಅವರಿಂದ ಸ್ವೀಕರಿಸಿದರು.
ಕಲೋತ್ಸವವು ಕಾಸರಗೋಡು ಸರ್ಕಾರಿ ಹೈಯರ್ ಸೆಕೆಂಡರಿ ಶಾಲೆಯಲ್ಲಿ ಅಕ್ಟೋಬರ್ 30, 31 ಮತ್ತು ನವೆಂಬರ್ 3, 4 ಮತ್ತು 5 ರಂದು ನಡೆಯಲಿದೆ.


