ಮಂಜೇಶ್ವರ: ಮೀಯಪದವು ಶ್ರೀ ವಿದ್ಯಾವರ್ಧಕ ಹೈಯರ್ ಸೆಕೆಂಡರಿ ಶಾಲೆ ಮತ್ತು ಶ್ರೀ ವಿದ್ಯಾವರ್ಧಕ ಪ್ರೌಢ ಪ್ರಾಥಮಿಕ ಶಾಲೆಯಲ್ಲಿ ಮಂಜೇಶ್ವರ ಉಪಜಿಲ್ಲಾ ಮಟ್ಟದ ಕ್ರೀಡಾಮೇಳಕ್ಕೆ ಮಂಗಳವಾರ ಧ್ವಜಾರೋಹಣಗೈದು ಚಾಲನೆ ನೀಡಲಾಯಿತು.
ಮಂಜೇಶ್ವರ ಉಪಜಿಲ್ಲಾ ವಿದ್ಯಾಧಿಕಾರಿ ಜಾರ್ಜ್ ಕ್ರಾಸ್ತ ಧ್ವಜಾರೋಹಣ ನೆರವೇರಿಸಿದರು. ಮೀಂಜ ಗ್ರಾಮ ಪಂಚಾಯತಿ ಉಪಾಧ್ಯಕ್ಷ ಜಯರಾಮ ಬಲ್ಲಂಗುಡೇಲು, ಸದಸ್ಯರಾದ ಜನಾರ್ಧನ ಪೂಜಾರಿ, ಮೊಹಮ್ಮದ್ ಕುಂಞÂ್ಞ, ಶ್ರೀ ವಿದ್ಯಾವರ್ಧಕ ಹೈಯರ್ ಸೆಕೆಂಡರಿ ಶಾಲೆಯ ಸಂಚಾಲಕ ಡಾ. ಜಯಪ್ರಕಾಶ ನಾರಾಯಣ, ಪ್ರಾಂಶುಪಾಲ ರಮೇಶ್. ಕೆ.ಎನ್, ಮುಖ್ಯೋಪಾಧ್ಯಾಯಿನಿ ಮೃದುಲ. ಕೆ.ಎಂ, ಪಿ.ಟಿ.ಎ ಅಧ್ಯಕ್ಷ ಇಬ್ರಾಹಿಂ ಹೊನ್ನಕಟ್ಟೆ, ಎಂ.ಪಿ.ಟಿ.ಎ ಅಧ್ಯಕ್ಷೆ ನಬೀಸತ್ ಮಿಸ್ರಿಯ, ಕ್ರೀಡಾಮೇಳದ ಕಾರ್ಯದರ್ಶಿ ಗ್ಯಾರಿ ಗಿಲ್ಮೋರ್, ಮಂಜೇಶ್ವರ ಉಪಜಿಲ್ಲಾ ಮುಖ್ಯೋಪಾಧ್ಯಾಯರ ಸಂಘದ ಕಾರ್ಯದರ್ಶಿ ಶಾಮ ಭಟ್. ಯು, ವಿದ್ಯಾವರ್ಧಕ ಪ್ರೌಢ ಪ್ರಾಥಮಿಕ ಶಾಲೆಯ ನಿವೃತ್ತ ಮುಖ್ಯೋಪಾಧ್ಯಾಯ ಶ್ರೀಧರ ರಾವ್, ಶ್ರೀ ವಿದ್ಯಾವರ್ಧಕ ಪ್ರೌಢ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯ ಅರವಿಂದಾಕ್ಷ ಭಂಡಾರಿ, ಎಸ್.ಎಂ.ಸಿ ಅಧ್ಯಕ್ಷ ಹಮೀದ್ ಮೈತಾಳ ಮತ್ತಿತರರು ಉಸ್ಥಿತರಿದ್ದರು.
ಮೂರು ದಿನ ನಡೆಯುವ ಕ್ರೀಡಾಮೇಳದಲ್ಲಿ ವಿವಿಧ ಶಾಲೆಗಳಿಂದ ಭಾಗವಹಿಸುವ ವಿದ್ಯಾರ್ಥಿಗಳು ತಮ್ಮ ಕ್ರೀಡಾ ಪ್ರತಿಭೆಯನ್ನು ಪ್ರದರ್ಶಿಸುವರು.ಉಪಜಿಲ್ಲೆಯ 85ಕ್ಕಿಂತಲೂ ಮಿಕ್ಕಿದ ಶಾಲೆಗಳ ಸಾವಿರಕ್ಕಿಂತಲೂ ಮಿಕ್ಕಿದ ವಿದ್ಯಾರ್ಥಿಗಳು ಭಾಗವಹಿಸುತ್ತಿದ್ದು, ಶಿಕ್ಷಕರು, ಪೋಷಕರೂ ನೆರೆದಿರುವುದು ಕಂಡುಬಂದಿದೆ.

.jpg)
