ಕಾಸರಗೋಡು: ಚಂದ್ರಗಿರಿ ಸಹೋದಯ ಶಾಲಾ ಸಂಕೀರ್ಣ ವತಿಯಿಂದ 2025-26ನೇ ಶೈಕ್ಷಣಿಕ ವರ್ಷದ ಸಿ.ಬಿ.ಎಸ್.ಇ. ಜಿಲ್ಲಾ ಕಲೋತ್ಸವ ಪರವನಡ್ಕದ ಅಲಿಯಾ ಹಿರಿಯ ಮಾಧ್ಯಮಿಕ ಶಾಲೆಯಲ್ಲಿ ಅ.21, 22 ಮತ್ತು 23 ರಂದು ನಡೆಯಲಿರುವುದಾಗಿ ಚಂದ್ರಗಿರಿ ಸಹೋದಯ ಶಾಲಾ ಸಮಿತಿಅಧ್ಯಕ್ಷ ಅಬ್ದುಲ್ಲಕುಞÂ ಪಿ ಸುದ್ದಿಗೋಷ್ಠೀಯಲ್ಲಿ ತಿಳಿಸಿದ್ದಾರೆ. 3000 ಕ್ಕೂ ಹೆಚ್ಚು ಪ್ರತಿಭಾನ್ವಿತ ವಿದ್ಯಾರ್ಥಿಗಳು ವಿವಿಧ ವಿಭಾಗಗಳಲ್ಲಿ ಸ್ಪರ್ಧಿಸಲಿದ್ದಾರೆ. ಚಂದ್ರಗಿರಿ ಸಹೋದಯದಲ್ಲಿರುವ 21 ಸಿಬಿಎಸ್‍ಇ ಶಾಲೆಗಳಿಂದ ವಿದ್ಯಾರ್ಥಿಗಳು ಪಾಲ್ಗೊಳ್ಳಲಿದ್ದಾರೆ. ಮಕ್ಕಳ ಬರವಣಿಗೆ ಕೌಶಲ್ಯ, ಸೃಜನಶೀಲತೆ, ತಂಡದ ಮನೋಭಾವ, ಸಂಗೀತ ಕೌಶಲ್ಯ ಮತ್ತು ತಾಂತ್ರಿಕ ಸಾಮಥ್ರ್ಯಗಳಂತಹ ವಿವಿಧ ಕ್ಷೇತ್ರಗಳಲ್ಲಿ ಮಕ್ಕಳ ಪ್ರತಿಭೆಯನ್ನು ಬೆಳೆಸುವ ಗುರಿಯೊಂದಿಗೆ ಎರಡನೇ ಹಂತದಲ್ಲಿ ಸಿಬಿಎಸ್‍ಇ ಸಹೋದಯ ಜಿಲ್ಲಾ ಕಲೋತ್ಸವವು ಆಯೋಜಿಸಲಾಘುತ್ತಿದೆ. ಜಿಲ್ಲಾ ಸ್ಪರ್ಧೆಯಲ್ಲಿ ಒಂದು, ಎರಡನೇ ಸ್ಥಾನ ಪಡೆದ ವಿಜೇತರಿಗೆ ರಾಜ್ಯ ಮಟ್ಟದ ಸ್ಪರ್ಧೆಗಳಲ್ಲಿ ಸ್ಪರ್ಧಿಸಲು ಅವಕಾಶ ಲಭಿಸಲಿದೆ. ಅಕ್ಟೋಬರ್ 21 ರಂದ ಬೆಳಗ್ಗೆ 9ಕ್ಕೆ ವೇದಿಕೇತರ ಸ್ಪರ್ಧೆ ನಡೆಯಲಿವೆ. 22 ಮತ್ತು 23 ರಂದು 6 ಸ್ಥಳಗಳಲ್ಲಿ ವೇದಿಕೆ ಸ್ಪರ್ಧೆಗಳು ನಡೆಯಲಿವೆ. 44 ವೇದಿಕೇತರ ಮತ್ತು 69 ವೇದಿಕೆ ಸ್ಪರ್ಧೆಗಳು ಸೇರಿದಂತೆ ಒಟ್ಟು 113 ಸ್ಪರ್ಧೆಗಳು ನಡೆಯಲಿವೆ.
ಅಕ್ಟೋಬರ್ 22 ಬುಧವಾರದಂದು ಸನ್ಮಾನ್ಯ ಕಾಸರಗೋಡು ಎಂ.ಪಿ.ಶ್ರೀ. ರಾಜಮೋಹನ್ ಉನ್ನಿತಾನ್ ಕಲೋತ್ಸವವನ್ನು ಉದ್ಘಾಟಿಸುವರು. ಅಲಿಯಾ ಶಾಲಾ ಸಂಚಾಲಕ ಮುಹಮ್ಮದ್ ಇಕ್ಬಾಲ್ ಪಿ, ಚಂದ್ರಗಿರಿ ಸಹೋದಯ ಅಧ್ಯಕ್ಷ ಅಬ್ದುಲ್ಲಕುಂಜಿ ಮೊದಲಾದವರು ಪಾಲ್ಗೊಳ್ಳುವರು.
ಅ. 23ರಂದು ಸಂಜೆ4ಕ್ಕೆ ನಡೆಯುವ ಸಮಾರೋಪ ಸಮಾರಂಭದಲ್ಲಿ ಬಹುಮಾನ ವಿತರಿಸಲಾಗುವುದು ಎಂದು ತಿಳಿಸಿದರು. ಸುದ್ದಿಗೋಷ್ಠೀಯಲ್ಲಿ ಆಲಿಯಾ ಶಾಲೆಯ ಪ್ರಾಂಶುಪಾಲ ಮುಹಮ್ಮದ್ ಇಕ್ಬಾಲ್ ಪಿ, ಕಲೋತ್ಸವದ ಸಹಾಯಕ ಸಂಚಾಲಕ ಉದಯಕುಮಾರ್ ಉಪಸ್ಥೀತರಿದ್ದರು.

